ಮೈಸೂರು, ಜೂ 23 (DaijiworldNews/DB): ಭ್ರಷ್ಟಾಚಾರದಿಂದ ಬಂದ ಹಣದಿಂದ ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಇದು ಮಾರಕವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ಆಪರೇಷನ್ ಕಮಲವನ್ನು ದೇಶದಲ್ಲಿ ಹುಟ್ಟು ಹಾಕಿದ್ದೇ ಕರ್ನಾಟಕದ ಬಿಜೆಪಿಯವರು. 2008ರಲ್ಲಿ ಯಡಿಯೂರಪ್ಪರಿಂದ ಇದು ಆರಂಭವಾಯಿತು. ಇದೀಗ ಇಡೀ ದೇಶಕ್ಕೇ ಇದು ಹಬ್ಬಿದೆ. ಆಪರೇಶನ್ ಕಮಲದಿಂದ ಶಾಸಕರನ್ನು ಖರೀದಿ ಮಾಡಿಯೇ ಅವರು ಸರ್ಕಾರ ರಚನೆ ಮಾಡುತ್ತಿದ್ದಾರೆಯೇ ಹೊರತು, ಬಹುಮತದಿಂದ ಸರ್ಕಾರ ರಚನೆ ಮಾಡುವ ತಾಕತ್ತು ಇಲ್ಲ ಎಂದರು.
ಪಕ್ಷಾಂತರ ತಡೆಯಲು ಪಕ್ಷಾಂತರ ಕಾಯ್ದೆ ತಿದ್ದಪಡಿ ಮಾಡಬೇಕು. ಅಲ್ಲದೆ,ಮ ಬೇರೆ ಪಕ್ಷಕ್ಕೆ ಪಕ್ಷಾಂತರವಾದರೆ ಹತ್ತು ವರ್ಷ ಚುನಾವಣೆಗೆ ಸ್ಪರ್ಧಿಸದಂತೆ ನಿಯಮ ರೂಪಿಸಬೇಕು. ಹಾಗಾದಲ್ಲಿ ಮಾತ್ರ ಪ್ರಜಾಪ್ರಭುತ್ವದ ಉಳಿವು ಸಾಧ್ಯ ಎಂದವರು ಅಭಿಪ್ರಾಯಪಟ್ಟರು.