ಮಂಗಳೂರು, ನ 25 (DaijiworldNews/SB): ನಗರದ ಉಳಾಯಿಬೆಟ್ಟು ಎಂಬಲ್ಲಿ ನಡೆದ ಎಂಟು ವರ್ಷದ ಬಾಲಕಿ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣವನ್ನು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮೋರ್ಚಾ ತೀವ್ರವಾಗಿ ಖಂಡಿಸಿದೆ.


ಹಂತಕರು ಈಗಾಗಲೇ ಪೊಲೀಸ್ ವಶದಲ್ಲಿದ್ದರೂ ತನಿಖಾ ಸಂದರ್ಭದಲ್ಲಿ ಸಾಕ್ಷಧಾರಗಳ ಕೊರತೆಯಿಂದ ನೇಣುಗಂಬದಿಂದ ತಪ್ಪಿಸಿಕೊಳ್ಳುವಂತಹ ಸನ್ನಿವೇಶ ಸೃಷ್ಟಿಯಾಗಬಾರದು ಎಂದು ಸಂಘಟನೆ ಅಧಿಕೃತರಲ್ಲಿ ಆಗ್ರಹಿಸಿದೆ.
ವಾಮಂಜೂರು ಪೊಲೀಸ್ ಠಾಣೆಗೆ ಭೇಟಿ ನೀಡಿದ ಸಂಘಟನೆಯ ಪದಾಧಿಕಾರಿಗಳು ಪೊಲೀಸ್ ಅಧಿಕಾರಿಗಳಲ್ಲಿ ಅರೋಪಿಗಳಿಗೆ ಕಠಿಣ ಶಿಕ್ಷೆ ದೊರಕಿಸುವಂತೆ ಆಗ್ರಹಿಸಿದರು.
ಇದಲ್ಲದೆ ಹೊರರಾಜ್ಯ ಕಾರ್ಮಿಕರಿಂದ ಸ್ಥಳೀಯರಿಗೆ ಯಾವುದೇ ಸಮಸ್ಯೆಗಳು ಉಂಟಾಗದಂತೆ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದರು.ನಂತರ ಬಾಲಕಿಯ ಮೃತಪಟ್ಟ ಪರಾರಿ ಸಮೀಪದ ಹಂಚಿನ ಕಾರ್ಖಾನೆ ಪರಿಸರಕ್ಕೆ ಭೇಟಿ ನೀಡಿದ ಪದಾಧಿಕಾರಿಗಳು ಇತರ ಕಾರ್ಮಿಕರಲ್ಲಿ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡರು.
ಸ್ಥಳೀಯ ಕಾರ್ಪೋರೇಟರ್ ರಘು ಸಾಲ್ಯಾನ್ ಅವರ ಸಂರಕ್ಷಣೆಯಲ್ಲಿರುವ ಮೃತ ಬಾಲಕಿಯ ಹೆತ್ತವರನ್ನೂ ಮಾತನಾಡಿ ಸಾಂತ್ವಾನ ಹೇಳಿದರು.ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಧನಲಕ್ಷ್ಮಿ ಗಟ್ಟಿ ಜಿಲ್ಲಾ ಕಾರ್ಯದರ್ಶಿ ಪೂಜಾ ಪೈ,ಸ್ಥಳೀಯ ಕಾರ್ಪೊರೇಟರ್ ಹೇಮಲತಾ ಸಾಲ್ಯಾನ್ , ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ರೂಪಾ ಧರ್ಮಯ್ಯ,ಆಶಾ ಡಿಸಿಲ್ವಾ , ಸುಪ್ರಿತಾ ಶೆಟ್ಟಿ ಸರೋಜಾ ಪೆರ್ಮುದೆ ಬಬಿತಾ ಶೆಟ್ಟಿ ಪ್ರಮುಖರಾದ ವೀಣಾ ನಾಯಕ್,ಸುಮಾ ಶೆಟ್ಟಿ , ಪವಿತ್ರ, ಶೈಲಜಾ , ಭಾಗ್ಯಲಕ್ಷ್ಮಿ, ರಘು ಸಾಲ್ಯಾನ್ ಉಪಸ್ಥಿತರಿದ್ದರು.