ಮಂಗಳೂರು, ನ 25 (DaijiworldNews/MS): ವಿವಿಧ ಬ್ಯಾಂಕ್ ಗಳ ನಕಲಿ ಎಟಿಎಂ ಕಾರ್ಡ್ ಬಳಸಿ ಹಂತ ಹಂತವಾಗಿ 1,88,800 ರೂ. ವಿದ್ ಡ್ರಾ ಮಾಡಿ ವಂಚಿಸಿರುವ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಿಚಿತ ವ್ಯಕ್ತಿಯೋರ್ವ ನಕಲಿ ಎಟಿಎಂ ಕಾರ್ಡ್ ಬಳಸಿ ಕಾರ್ ಸ್ಟ್ರೀಟ್ ನಲ್ಲಿರುವ ವಿಶ್ವಕರ್ಮ ಸಹಕಾರ ಬ್ಯಾಂಕ್ ನ ಎಟಿಂ ಮೆಷಿನ್ ನಿಂದ ಅ.24 ರಂದು ಮುಂಜಾವ 4.40 ಕ್ಕೆ 27,000ರೂ. ಅದೇ ದಿನ ಬೆಳಗ್ಗೆ 11 ಕ್ಕೆ 9,800 ರೂ. 30,000 ರೂ ಮರುದಿನ 20,000ರೂ ವಿದ್ ಡ್ರಾ ಮಾಡಿದ್ದಾನೆ. ಅಲ್ಲದೆ ನ.20 ಬೆಳಗ್ಗೆ 5 ಗಂಟೆಗೆ ಮತ್ತೆ ನಕಲಿ ಎಟಿಎಂ ಕಾರ್ಡ್ ಬಳಸಿ 1.02 ಲ ರೂ ಹಣ ವಿದ್ ಡ್ರಾ ಮಾಡಿದ್ದಾನೆ. ಆಗ ಬ್ಯಾಂಕ್ ನ ಭದ್ರತಾ ಸಿಬಂದಿಗೆ ಅನುಮಾನ ಬಂದು ವಿಚಾರಿಸಿದಾಗ ಅಪರಿಚಿತ ವ್ಯಕ್ತಿ ತಪ್ಪಿಸಿಕೊಂಡು ಹೋಗಿದ್ದಾನೆ ಎಂದು ವಿಶ್ವಕರ್ಮ ಬ್ಯಾಂಕ್ ನ ಪ್ರಧಾನ ವ್ಯವಸ್ಥಾಪಕರು ಪೊಲೀಸರಿಗೆ ದೂರು ನೀಡಿದ್ದಾರೆ