ಕಾಸರಗೋಡು, ಅ. 13 (DaijiworldNews/SM): ಕೇರಳವನ್ನೇ ಬೆಚ್ಚಿ ಬೀಳಿಸಿದ್ದ ಪತಿಯಿಂದ ಪತ್ನಿಯ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸೂರಜ್ ಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ.

ಅಂಗವಿಕಲೆಯಾಗಿದ್ದ ಪತ್ನಿಯನ್ನು ಹಾವು ಕಚ್ಚಿಸಿ ಆರೋಪಿ ಪತಿರಾಯ ಕೊಂದಿದ್ದ. ಹಾವು ಕಚ್ಚಿಸಿ ಹೆಂಡತಿಯನ್ನು ಕೊಂದವನಿಗೆ ಜೀವಾವಧಿ ಶಿಕ್ಷೆಯಾಗಿದೆ. ಆರೋಪಿ ಸೂರಜ್ ನ ಎಲ್ಲಾ ಆರೋಪಗಳು ಸಾಬೀತು ಹಿನ್ನಲೆಯಲ್ಲಿ ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ ನೀಡಿಲಾಗಿದೆ. ಕೊಲ್ಲಂನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.
ಅಂಗವಿಕಲೆಯಾಗಿದ್ದ ಪತ್ನಿ ಉತ್ರಾ(25)ಳನ್ನು ಆರೋಪಿ ಪತಿ ಕೊಲೆಗೈದಿದ್ದ. ವಿಷಕಾರಿ ನಾಗರಹಾವಿನಿಂದ ಕಚ್ಚಿಸಿ ಕೊಲೆಗೈಯ್ಯಲಾಗಿತ್ತು. ಕಳೆದ ವರ್ಷ ಮೇ ತಿಂಗಳಲ್ಲಿ ಕೊಲೆ ನಡೆದಿತ್ತು.
ಕೊಲೆ ಯತ್ನದ ಅಪರಾಧಕ್ಕಾಗಿ ಆರೋಪಿ ಸೂರಜ್ ಗೆ ಜೀವಾವಧಿ ಶಿಕ್ಷೆಯಾಗಿದ್ದು, ವಿಷ ನೀಡಿದ್ದಕ್ಕೆ ೧೦ ವಷ ಹಾಗೂ ಸಾಕ್ಷ್ಯ ನಾಶಕ್ಕೆ ೭ ವರ್ಷ ಶಿಕ್ಷೆ ನೀಡಲಾಗಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಮನೋಜ್ ಎಂ. ರಿಂದ ಶಿಕ್ಷೆ ಪ್ರಕಟಿಸಿದ್ದಾರೆ.