ಮಂಗಳೂರು, ಅ. 13 (DaijiworldNews/SM): ಡಿಕೆಶಿಯವರ ಬಗ್ಗೆ ಕಾಂಗ್ರೆಸ್ ನಾಯಕರಿಬ್ಬರು ಹೇಳಿಕೆ ನೀಡಿದ್ದು, ಕಾಂಗ್ರೆಸ್ ನ ಭ್ರಷ್ಟಾಚಾರ ಕರ್ಮಕಾಂಡ ಬಯಲಿಗೆ ಬಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಟೀಕಿಸಿದ್ದಾರೆ.

ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ನವರು ಕಲೆಕ್ಷನ್ ಗಿರಾಕಿಗಳೆಂದು ನಾವು ಹೇಳಿದ್ದಲ್ಲ, ಕಾಂಗ್ರೆಸ್ ನ ನಾಯಕರೇ ಹೇಳಿದ್ದಾರೆ. ಈ ಬಗ್ಗೆ ಸಿಬಿಐ ತನಿಖೆಯಾಗಲಿ. ಅಲ್ಲದೆ, ಪ್ರಕರಣದ ಸತ್ಯಾಸತ್ಯತೆ ಹೊರ ಬರಲಿ. ಇದರ ಹಿಂದೆ ಡಿಕೆಶಿಯನ್ನು ಮುಗಿಸುವ ತಂತ್ರಗಾರಿಕೆ ಇದೆ. ಡಿಕೆಶಿ ಪ್ರಭಾವ ಕುಗ್ಗಿಸಲು ಸಿದ್ದರಾಮಯ್ಯ ಮಾಡಿರುವ ತಂತ್ರಗಾರಿಕೆ ಎಂದು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ನ ಈ ಹೇಳಿಕೆ ಸಿದ್ದರಾಮಯ್ಯನ ಗುಂಪುಗಾರಿಕೆ ಪ್ರೇರಿತವಾಗಿದೆ. ಸಿದ್ದರಾಮಯ್ಯ ಓರ್ವ ಈ ರಾಜ್ಯದ ಹಿಟ್ಲರ್ ಆಗಿದ್ದಾರೆ. ಅವರಿದ್ದಾಗ ಸಾಕಷ್ಟು ಹಿಂದೂಗಳ ಹತ್ಯೆಯಾಗಿದೆ. ಸಿದ್ದರಾಮಯ್ಯ ಆರ್ ಎಸ್ ಎಸ್ ಗೆ ಬೈದಾಗ ಯೋಚನೆ ಮಾಡಬೇಕಿತ್ತು. ಸಂಘ ಇಡೀ ಜಗತ್ತಿನಾದ್ಯಂತ ಸಮಾಜ ಸೇವೆ ಮಾಡುತ್ತಿದೆ. ಕಾಂಗ್ರೆಸ್ ಒಂದೇ ಒಂದು ಸೇವಾಕಾರ್ಯ ಮಾಡಿಲ್ಲ ಎಂದು ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.