ಮಂಗಳೂರು, ಮೇ 02 (DaijiworldNews/SM): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇ 2 ರ ರವಿವಾರದಂದು 996 ಹೊಸ ಸೋಂಕುಗಳು ಪ್ರಕರಣಗಳು ಪತ್ತೆಯಾಗಿದ್ದು, ಓರ್ವ ಸೋಂಕಿಗೆ ಬಲಿಯಾಗಿದ್ದಾರೆ. ಇದೇ ವೇಳೆ ಉಡುಪಿ ಜಿಲ್ಲೆಯಲ್ಲಿ 413 ಹೊಸ ಪ್ರಕರಣಗಳು ದೃಢಪಟ್ಟಿದ್ದು, ಇಬ್ಬರು ಸೋಂಕಿಗೆ ಬಲಿಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಬುಲೆಟಿನ್ ಪ್ರಕಾರ, ಈವರೆಗೆ ಒಟ್ಟು 7,49,956 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ 7,02,918 ಮಾದರಿಗಳು ನಕಾರಾತ್ಮಕವಾಗಿವೆ.
ಜಿಲ್ಲೆಯಲ್ಲಿ ಒಟ್ಟು ಸಕಾರಾತ್ಮಕ ಪ್ರಕರಣಗಳ ಸಂಖ್ಯೆ 47,038 ಆಗಿದ್ದು, ಈ ಪೈಕಿ 7,595 ಪ್ರಕರಣಗಳು ಪ್ರಸ್ತುತ ಸಕ್ರಿಯವಾಗಿವೆ. ಆಸ್ಪತ್ರೆಗಳಿಂದ ರವಿವಾರ 413 ರೋಗಿಗಳನ್ನು ಬಿಡುಗಡೆ ಮಾಡಲಾಗಿದ್ದು, ಒಟ್ಟು ಚೇತರಿಕೆಯ ಸಂಖ್ಯೆ 38,683 ಕ್ಕೆ ತಲುಪಿದೆ. ಜಿಲ್ಲೆಯಲ್ಲಿ ಇದುವರೆಗೆ ಸಾವಿನ ಸಂಖ್ಯೆ 760 ತಲುಪಿದೆ.
ಉಡುಪಿ ಜಿಲ್ಲೆಯ ಇಂದಿನ ಕೊರೋನಾ ರಿಪೋರ್ಟ್:
ಜಿಲ್ಲಾ ಆರೋಗ್ಯ ಬುಲೆಟಿನ್ ಪ್ರಕಾರ, ಉಡುಪಿ ಭಾನುವಾರ 413 ಸಕಾರಾತ್ಮಕ ಪ್ರಕರಣಗಳು ವರದಿಯಾಗಿವೆ. ಸೋಂಕಿತ ರೋಗಿಗಳ ಒಟ್ಟು ಸಂಖ್ಯೆ 32,625ಕ್ಕೆ ತಲುಪಿದೆ.
ಭಾನುವಾರದ ವೇಳೆಗೆ, 788 ರೋಗಿಗಳನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದ್ದು,29,914 ಮಂದಿ ಚೇತರಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 2,511 ಸಕ್ರಿಯ ಪ್ರಕರಣಗಳಿವೆ. ಭಾನುವಾರ ಎರಡು ಸಾವುಗಳು ವರದಿಯಾಗಿದ್ದು, ಇದುವರೆಗಿನ ಸಾವಿನ ಸಂಖ್ಯೆ 200 ಕ್ಕೆ ಏರಿದೆ.