ಮಂಗಳೂರು: ನಾರಿಮಣಿಯರಿಗಾಗಿ "ನವರಂಗಿ ಸೀರೆ ವಿಡಿಯೋ ಸ್ಪರ್ಧೆ" - 80,000 ರೂ. ಗೆಲ್ಲುವ ಸುವರ್ಣಾವಕಾಶ
Fri, Sep 19 2025 07:03:45 PM
ಮಂಗಳೂರು, ಸೆ. 19 (DaijiworldNews/AA): ನವರಾತ್ರಿ ಪ್ರಯುಕ್ತ ನಾರಿಮಣಿಯರಿಗಾಗಿ "ನವರಂಗಿ ಸೀರೆ" ಎಂಬ ವಿಡಿಯೋ ಸ್ಪರ್ಧೆಯನ್ನು ನೂತನ್ ಕ್ಲೋತ್ ಸೆಂಟರ್ ಮಡಂತ್ಯಾರು ಇದರ ಪ್ರಾಯೋಜಕತ್ವದಲ್ಲಿ ದಾಯ್ಜಿವರ್ಲ್ಡ್ ವಾಹಿನಿ ಆಯೋಜಿಸಿದೆ.
ಮಂಗಳೂರು ದಸರಾದ ಸಂತಸವನ್ನು ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಕಳೆದ ಹಲವು ವರ್ಷಗಳಿಂದ ನವರಂಗಿ ಸೀರೆ ಸ್ಪರ್ಧೆಯನ್ನು ಆಯೋಜಿಸಿಕೊಂಡು ಬಂದಿರುವ ದಾಯ್ಜಿವರ್ಲ್ಡ್ ವಾಹಿನಿ ಈ ಬಾರಿಯೂ ನೂತನ್ ಕ್ಲೋತ್ ಸೆಂಟರ್ ಮಡಂತ್ಯಾರು ಇವರ ಪ್ರಾಯೋಜಕತ್ವದಲ್ಲಿ ಸೀರೆ ಸ್ಪರ್ಧೆ ಏರ್ಪಡಿಸಿದೆ. ಅಂದದ ನಾರಿಯರು ಸುಂದರವಾದ ಸೀರೆಗಳನ್ನು ಧರಿಸಿ ವಿಡಿಯೋ ಕಳುಹಿಸುವ ಸ್ಪರ್ಧೆ ಇದಾಗಿದ್ದು, ವಿಜೇತರಿಗೆ 80 ಸಾವಿರ ರೂ. ಮೌಲ್ಯದ ಬಹುಮಾನ ಹಾಗೂ ಕೊನೆಯಲ್ಲಿ ಬಂಪರ್ ಬಹುಮಾನವನ್ನು ಪಡೆದುಕೊಳ್ಳುವ ಸುವರ್ಣಾವಕಾಶವಿದೆ.
ನಿಗದಿತ ದಿನಗಳಲ್ಲಿ ನಿಗದಿತ ಬಣ್ಣದ ಸೀರೆಯನ್ನುಟ್ಟ ಗ್ರೂಪ್ ವಿಡಿಯೋವೊಂದನ್ನು ದಾಯ್ಜಿವರ್ಲ್ಡ್ ವಾಹಿನಿಯ ವಾಟ್ಸಾಪ್ ಸಂಖ್ಯೆ 7022604561 ಗೆ ಕಳುಹಿಸಬೇಕು. ತೀರ್ಪುಗಾರರು ಆಯ್ದ ವಿಡಿಯೋಗಳನ್ನು ಸೆಪ್ಟೆಂಬರ್ 22ರಿಂದ 30ರ ತನಕ ಸಂಜೆ 7:00 ಗಂಟೆಯ ನವರಂಗಿ ಸೀರೆ ಕಾರ್ಯಕ್ರಮದಲ್ಲಿ ಪ್ರಸಾರ ಮಾಡಲಾಗುವುದು. ಹಾಗೂ ಅತ್ಯುತ್ತಮ ತಂಡಕ್ಕೆ ಬಹುಮಾನ ಘೋಷಿಸಲಾಗುವುದು.
ಇಂತಿವೆ ಬಣ್ಣದ ಗೊಂಚಲು..! ಸೆಪ್ಟೆಂಬರ್ 22 - ಬಿಳಿ ಬಣ್ಣ ಸೆಪ್ಟೆಂಬರ್ 23 - ಕೆಂಪು ಬಣ್ಣ ಸೆಪ್ಟೆಂಬರ್ 24 - ಕಡು ನೀಲಿ ಸೆಪ್ಟೆಂಬರ್ 25 - ಹಳದಿ ಬಣ್ಣ ಸೆಪ್ಟೆಂಬರ್ 26 - ಹಸಿರು ಬಣ್ಣ ಸೆಪ್ಟೆಂಬರ್ 27 - ಬೂದುಬಣ್ಣ ಸೆಪ್ಟೆಂಬರ್ 28 - ಕಿತ್ತಳೆ ಬಣ್ಣ ಸೆಪ್ಟೆಂಬರ್ 29 - ಗುಲಾಬಿ ಬಣ್ಣ ಸೆಪ್ಟೆಂಬರ್ 30 - ನೇರಳೆ ಬಣ್ಣ
ನಿಯಮಗಳು ಇಂತಿವೆ...! * ಒಂದು ತಂಡದಲ್ಲಿ ಕನಿಷ್ಟ 3 ಮಂದಿ ಮಹಿಳೆಯರು ಇರಬೇಕು. * "ನೂತನ್ ಕ್ಲೋತ್ ಸೆಂಟರ್ ಮಡಂತ್ಯಾರ್ ಜೊತೆ ನಮ್ಮ ನವರಾತ್ರಿ" ಎಂಬ ಸ್ಲೋಗನ್ ಕಡ್ಡಾಯವಾಗಿ ಹೇಳಿ ವಿಡಿಯೋ ಮಾಡಬೇಕು. * ವಿಡಿಯೋದಲ್ಲಿರುವ ಎಲ್ಲಾ ಮಹಿಳೆಯರು ಆಯಾ ದಿನ ಸೂಚಿಸಿದ ಬಣ್ಣದ ಸೀರೆಯನ್ನು ಮಾತ್ರ ಉಡಬೇಕು. * ವಿಡಿಯೋಗಳನ್ನು ಬಣ್ಣಕ್ಕನುಸಾರವಾಗಿ ಆಯಾ ದಿನ ಮಧ್ಯಾಹ್ನ 1:00 ಗಂಟೆಯೊಳಗೆ ಕಳುಹಿಸಬೇಕು. * ವೀಡಿಯೋಗಳನ್ನು ಕಳುಹಿಸುವಾಗ ಹೆಸರು, ಊರು ಹಾಗೂ ಫೋನ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು. * ಮಧ್ಯಾಹ್ನ 1:00 ಗಂಟೆಯ ನಂತರ ಬಂದ ವಿಡಿಯೋಗಳನ್ನು ಪರಿಗಣಿಸಲಾಗುವುದಿಲ್ಲ ಮತ್ತು ತೀರ್ಪುಗಾರರ ತೀರ್ಮಾನವೇ ಅಂತಿಮ.
ಹೆಂಗಳೆಯರ ಖುಷಿ ಹೆಚ್ಚಿಸಿದ ನೂತನ್ ಕ್ಲೋತ್ ಸೆಂಟರ್ ಮಡಂತ್ಯಾರು! ಕರಾವಳಿಯ ಜನಪ್ರಿಯ ಹಾಗೂ ಜವಳಿ ಪ್ರಿಯರ ಮನಸೂರೆಗೊಳಿಸುವ ಉಡುಪುಗಳ ತಾಣ 'ನೂತನ್ ಕ್ಲೋತ್ ಸೆಂಟರ್' ಮಡಂತ್ಯಾರು ಕಳೆದ ಹಲವು ವರ್ಷಗಳಿಂದ ಅತ್ಯುತ್ತಮ ಗುಣಮಟ್ಟದ ಸೇವೆಗಳ ಮೂಲಕ ಗ್ರಾಹಕರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದೆ. 1949ರಿಂದ ಕಾರ್ಯನಿರ್ವಹಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಡಂತ್ಯಾರ್ನಲ್ಲಿರುವ ನೂತನ್ ಕ್ಲೋತ್ ಸೆಂಟರ್ ನಲ್ಲಿ ಮಿತದರದ ವೈಶಿಷ್ಟ್ಯದೊಂದಿಗೆ ಮದುವೆಗೆ ಬೇಕಾದಂತಹ ಸಾಂಪ್ರದಾಯಿಕ ಉಡುಪುಗಳು, ರೇಷ್ಮೆ ಸೀರೆಗಳು, ಪುರುಷರ ಉಡುಪುಗಳು, ಮಕ್ಕಳ ಉಡುಪುಗಳ ಜೊತೆ ಫ್ಯಾಷನ್ ಉಡುಪುಗಳು ಒಂದೇ ಸೂರಿನಡಿ ಲಭ್ಯವಿದೆ.
ದಶಕಗಳಿಂದ ಎಲ್ಲರ ನೆಚ್ಚಿನ ಬಟ್ಟೆ ಮಳಿಗೆಯಾಗಿ ಕಂಗೊಳಿಸುವ ನೂತನ್ ಕ್ಲೋತ್ ಸೆಂಟರ್ ಮಡಂತ್ಯಾರು ನವರಾತ್ರಿಯ ನವೋಲ್ಲಾಸಕ್ಕೆ ನವವರ್ಣದ ನವರಂಗಿ ಸೀರೆ ಸ್ಪರ್ಧೆಯನ್ನು ಹೊತ್ತು ತರುತ್ತಿದೆ.