ನವದೆಹಲಿ, ಮೇ. 09 (DaijiworldNews/AK): ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆಯ ಹಿನ್ನೆಲೆ ವಿವಿಧ ವಿಮಾನಯಾನ ಸಂಸ್ಥೆಗಳು ದೆಹಲಿ ವಿಮಾನ ನಿಲ್ದಾಣಕ್ಕೆ ಮತ್ತು ಅಲ್ಲಿಂದ ಹೊರಡುವ 138 ವಿಮಾನಗಳನ್ನು ರದ್ದುಗೊಳಿಸಿವೆ ಎಂದು ಮೂಲಗಳು ತಿಳಿಸಿವೆ.

ಶುಕ್ರವಾರ ಬೆಳಗ್ಗೆ 5ರಿಂದ ಮಧ್ಯಾಹ್ನ 2ರವರೆಗೆ ಒಟ್ಟು 66 ದೇಶೀಯ ನಿರ್ಗಮನಗಳು ಮತ್ತು 63 ಆಗಮನ ವಿಮಾನಗಳು, 5 ಅಂತರರಾಷ್ಟ್ರೀಯ ನಿರ್ಗಮನಗಳು ಮತ್ತು 4 ಆಗಮನ ವಿಮಾನಗಳ ಹಾರಾಟವನ್ನು ಭದ್ರತಾ ದೃಷ್ಟಿಯಿಂದ ರದ್ದು ಮಾಡಲಾಗಿದೆ
ವಾಯುಪ್ರದೇಶದ ಪರಿಸ್ಥಿತಿ ಮತ್ತು ಹೆಚ್ಚಿದ ಭದ್ರತಾ ಕ್ರಮಗಳಿಂದಾಗಿ, ಕೆಲವು ವಿಮಾನಗಳ ವೇಳಾಪಟ್ಟಿ ಮತ್ತು ಭದ್ರತಾ ಪ್ರಕ್ರಿಯೆಯ ಸಮಯದ ಮೇಲೆ ಪರಿಣಾಮ ಬೀರಬಹುದು ಎಂದು ಡಿಐಎಎಲ್ ಎಕ್ಸ್ ಮೂಲಕ ತಿಳಿಸಿದೆ.
ಭದ್ರತಾ ಚೆಕ್ಪೋಸ್ಟ್ಗಳಲ್ಲಿ ಹೆಚ್ಚುವರಿ ಸಮಯಕ್ಕೆ ಸಿದ್ಧರಾಗಿರಬೇಕು ಮತ್ತು ಸುಗಮ ಪ್ರಕ್ರಿಯೆಗಾಗಿ ವಿಮಾನಯಾನ ಮತ್ತು ಭದ್ರತಾ ಸಿಬ್ಬಂದಿಯೊಂದಿಗೆ ಸಹಕರಿಸಬೇಕು ಎಂದು ಪ್ರಯಾಣಿಕರಿಗೆ ಸಲಹೆ ನೀಡಿದೆ.