ಮಂಗಳೂರು ಸೆ 12: ಫೇಸ್ ಬುಕ್ ನಲ್ಲಿ ನಕಲಿ ಖಾತೆ ತೆರೆದು, ಅಸಭ್ಯ ಪೋಸ್ಟ್ ಗಳನ್ನು ಹಾಕಿದ್ದ ಆರೋಪದ ಮೇಲೆ ಛತ್ತೀಸ್ ಗಡದ ಯುವಕನೊಬ್ಬನನ್ನು ಕಂಕನಾಡಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
![](https://daijiworld.ap-south-1.linodeobjects.com/iWeb/tvdaijiworld/img_tv247/12092017_ravte.jpg)
ಛತ್ತೀಸ್ ಗಡದ ನಂದಗಾವ ಜಿಲ್ಲೆಯ ತೋರನ್ ಲಾಲ್ ರಾವಟೆ ಬಂಧಿತ ಆರೋಪಿ.ಫೇಸ್ ಬುಕ್ ನಲ್ಲಿ ನಕಲಿ ಖಾತೆಯನ್ನು ಸೃಷ್ಠಿಸಿ ಅಸಭ್ಯ ಚಿತ್ರ, ಆಶ್ಲೀಲ ಸಂದೇಶಗಳನ್ನು ಹಾಕಿರುವ ಬಗ್ಗೆ ದೂರು ದಾಖಲಾಗಿತ್ತು. ಕಾರ್ಯಪ್ರವೃತರಾದ ಪೊಲೀಸರು, ನಗರದ ಯೆಯ್ಯಾಡಿಯಲ್ಲಿದ್ದ ಆರೋಪಿಯನ್ನು ಬಂಧಿಸಿ ನ್ಯಾಯಲಯಕ್ಕೆ ಹಾಜರುಪಡಿಸಿದ್ದು ಸದ್ಯ ಆರೋಪಿಗೆ ನ್ಯಾಯಂಗ ಬಂಧನ ವಿಧಿಸಲಾಗಿದೆ.