ಕಟಪಾಡಿ ಏ.21 (DaijiworldNews/AK): ಕೊಲ್ಲೂರುನಿಂದ ಸುಳ್ಯದತ್ತ ತೆರಳುತ್ತಿದ್ದ ವ್ಯಾಗನಾರ್ ಕಾರ್ ಒಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿ ಮಗುಚಿ ಬಿದ್ದ ಘಟನೆ ರಾ.ಹೆ. 66ರ ಕಟಪಾಡಿ ತೇಕಲ್ ತೋಟ ಎಂಬಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದೆ.

ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬದ ನಾಲ್ವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.