ಚೆನ್ನೈ, ಫೆ.04 (DaijiworldNews/AA): ಮಲಯಾಳಂ, ತೆಲುಗು, ತಮಿಳು ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ನಟಿ ಪಾರ್ವತಿ ನಾಯರ್ ಅವರು ಫ್ಯಾನ್ಸ್ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಪಾರ್ವತಿ ನಾಯರ್ ಅವರು ಚೆನ್ನೈ ಉದ್ಯಮಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಸದ್ಯದಲ್ಲೇ ಹಸೆಮಣೆ ಏರಲು ಸಜ್ಜಾಗಿದ್ದಾರೆ.

ಸದ್ಯ ಎಂಗೇಜ್ಮೆಂಟ್ನ ಫೋಟೋಗಳನ್ನು ನಟಿ ಪಾರ್ವತಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಭಾವಿ ಪತಿ ಜೊತೆಗಿನ ಸುಂದರ ಫೋಟೋ ಶೇರ್ ಮಾಡುವ ಮೂಲಕ ಎಂಗೇಜ್ ಆಗಿರೋದಾಗಿ ಪಾರ್ವತಿ ಅಧಿಕೃತವಾಗಿ ತಿಳಿಸಿದ್ದಾರೆ.
ಚೆನ್ನೈ ಮೂಲದ ಉದ್ಯಮಿ ಆಶ್ರಿತ್ ಅಶೋಕ್ ಜೊತೆ ಪಾರ್ವತಿ ವಿವಾಹವಾಗಲಿದ್ದಾರೆ. ಸದ್ಯದಲ್ಲೇ ಇಬ್ಬರೂ ಹಸೆಮಣೆ ಏರಲಿದ್ದು, ಮದುವೆ ಡೇಟ್ ಬಗ್ಗೆ ಸದ್ಯದಲ್ಲೇ ರಿವೀಲ್ ಮಾಡಲಿದ್ದಾರೆ. ಇದೀಗ ನಟಿಗೆ ಕಲಾವಿದರು ಮತ್ತು ಫ್ಯಾನ್ಸ್ ಶುಭಕೋರುತ್ತಿದ್ದಾರೆ.