ನೆದರ್ಲ್ಯಾಂಡ್, ಫೆ.03 (DaijiworldNews/AA): ವಿಶ್ವ ಚಾಂಪಿಯನ್ ಡಿ ಗುಕೇಶ್ ಅವರನ್ನು ಸೋಲಿಸಿ ಗ್ರ್ಯಾಂಡ್ಮಾಸ್ಟರ್ ಆರ್ ಪ್ರಜ್ಞಾನಂದ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.

ನೆದರ್ಲ್ಯಾಂಡ್ನ ವಿಜ್ಕ್ ಆನ್ ಝೀಯಲ್ಲಿ ನಡೆದ ಟಾಟಾ ಸ್ಟೀಲ್ ಮಾಸ್ಟರ್ಸ್ 2025 ಚೆಸ್ ಟೂರ್ನಿ ಫೈನಲ್ನಲ್ಲಿ ಪ್ರಜ್ಞಾನಂದ ಹಾಗೂ ವಿಶ್ವ ಚಾಂಪಿಯನ್ ಡಿ ಗುಕೇಶ್ ಮುಖಾಮುಖಿಯಾಗಿದ್ದರು. ಈ ವೇಳೆ ನಡೆದ ಬ್ಲಿಟ್ಜ್ ಪ್ಲೇಆಫ್ಗಳಲ್ಲಿ, ಪ್ರಜ್ಞಾನಂದ ಅವರು ಗುಕೇಶ್ ವಿರುದ್ಧ ಮೊದಲ ಗೇಮ್ನಲ್ಲಿ ಸೋತರು. ಆ ಬಳಿಕ ಕಂಬ್ಯಾಕ್ ಮಾಡಿದ ಪ್ರಜ್ಞಾನಂದ ಸತತ ಎರಡು ಗೇಮ್ಗಳನ್ನು ಗೆದ್ದು ಚಾಂಪಿಯನ್ ಪಟ್ಟಕ್ಕೇರಿದ್ದಾರೆ.
ಟಾಟಾ ಸ್ಟೀಲ್ ಮಾಸ್ಟರ್ಸ್ 2025 ಚೆಸ್ ಟೂರ್ನಿಯ ಫೈನಲ್ ಸುತ್ತಿನ ಮುಕ್ತಾಯದ ವೇಳೆಗೆ ಡಿ ಗುಕೇಶ್ ಅಗ್ರಸ್ಥಾನ ಅಲಂಕರಿಸಿದರೆ, ಆರ್. ಪ್ರಜ್ಞಾನಂದ ದ್ವಿತೀಯ ಸ್ಥಾನ ಗಳಿಸಿದ್ದರು. ಇಬ್ಬರು 8.5 ಅಂಕಗಳನ್ನು ಗಳಿಸಿದ್ದರಿಂದ ಚಾಂಪಿಯನ್ ನಿರ್ಣಾಯಕಕ್ಕಾಗಿ ಟ್ರೈಬ್ರೇಕರ್ ಪಂದ್ಯ ನಡೆಸಲಾಯಿತು.
ಈ ನಿರ್ಣಾಯಕ ಸುತ್ತಿನಲ್ಲಿ ವಿಶ್ವ ಚಾಂಪಿಯನ್ ಡಿ. ಗುಕೇಶ್ಗೆ ಸೋಲುಣಿಸಿ ಆರ್. ಪ್ರಜ್ಞಾನಂದ ಟಾಟಾ ಸ್ಟೀಲ್ ಮಾಸ್ಟರ್ಸ್ 2025 ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.