ವಾಷಿಂಗ್ಟನ್, ಫೆ.03(DaijiworldNews/AK ) :ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಬಂದ ಬಳಿಕ ಪನಾಮ ಕಾಲುವೆಯನ್ನು ವಶಕ್ಕೆ ತೆಗೆದುಕೊಳ್ಳುವುದಾಗಿ ಟ್ರಂಪ್ ಬೆದರಿಕೆ ಹಾಕುತ್ತಿದ್ದಾರೆ.

ಇದೇ ಹೊತ್ತಲ್ಲಿ, ಪನಾಮ ದೇಶ ಅಮೆರಿಕದ ಒತ್ತಡಕ್ಕೆ ತಲೆಬಾಗಿದಂತೆ ಕಾಣುತ್ತಿದೆ. ಚೀನಾದ ಬೆಲ್ಟ್ ಅಂಡ್ ರೋಡ್ ಇನಿಷಿಯೇಟಿವ್ (BRI) ಎನ್ನುವ ಜಾಗತಿಕ ಮಹಾ ಯೋಜನೆಯಿಂದ ಪನಾಮ ಹೊರಬರಲು ನಿರ್ಧರಿಸಿದೆ.
ಪನಾಮ ಲ್ಯಾಟಿನ್ ಅಮೆರಿಕದ ದಕ್ಷಿಣ ತುದಿಯಲ್ಲಿದೆ. ದಕ್ಷಿಣ ಅಮೆರಿಕದ ಖಂಡಕ್ಕೆ ಹೊಂದಿಕೊಂಡಂತಿದೆ. ಇಲ್ಲಿಯೇ 82 ಕಿಮೀ ಉದ್ದದ ಕೃತಕ ಕಾಲುವೆಯೊಂದಿದೆ. ಇದು ಕೆರೆಬಿಯನ್ ಸಮುದ್ರ ಮತ್ತು ಪೆಸಿಫಿಕ್ ಮಹಾಸಾಗರಕ್ಕೆ ಕೊಂಡಿಯಾಗಿ ಈ ಕಾಲುವೆ ಇದೆ.
20ನೇ ಶತಮಾನದ ಆರಂಭದಲ್ಲಿ ಅಮೆರಿಕವೇ ಈ ಕಾಲುವೆ ನಿರ್ಮಿಸಿತ್ತು. ಹಡಗುಗಳ ಸಾಗಾಟಕ್ಕೆಂದು ನಿರ್ಮಿಸಿರುವ ಕಾಲುವೆ ಇದು. 20ನೇ ಶತಮಾನದ ಎಪ್ಪತ್ತರ ದಶಕದವರೆಗೂ ಈ ಕಾಲುವೆಯ ಪೂರ್ಣ ನಿಯಂತ್ರಣ ಅಮೆರಿಕದ ಬಳಿಯೇ ಇತ್ತು. ನಂತರ ಅದನ್ನು ಪನಾಮಕ್ಕೆ ಬಿಟ್ಟುಕೊಡಲಾಯಿತು.
ಪನಾಮ ದೇಶವು 2017ರಲ್ಲಿ ಚೀನಾದ ಬಿಆರ್ಐ ಯೋಜನೆಗೆ ಕೈ ಜೋಡಿಸಿದೆ. ಇದರ ಬೆನ್ನಲ್ಲೇ ಪನಾಮ ಕಾಲುವೆಯ ನಿಯಂತ್ರಣವನ್ನು ಚೀನಾ ಮಾಡುತ್ತಿದೆ ಎಂಬುದು ಅಮೆರಿಕಕ್ಕೆ ಕೆಂಗಣ್ಣಿಗೆ ಗುರಿಯಾಗಿದೆ. .