ಮುಂಬೈ, ಫೆ.03(DaijiworldNews/ AK) :ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಬಿಸಿಸಿಐ 5 ಕೋಟಿ ರೂ. ಬಹುಮಾನ ಮೊತ್ತ ಘೋಷಿಸಿದೆ.

ಕೌಲಾಲಂಪುರದ ಬೇಯುಮಾಸ್ ಓವಲ್ ಮೈದಾನದಲ್ಲಿ ನಡೆದ ಅಂಡರ್-19 ಮಹಿಳಾ ಟಿ20 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಸೌತ್ ಆಫ್ರಿಕಾ ತಂಡವನ್ನು ಮಣಿಸಿ 2ನೇ ಬಾರಿ ವಿಶ್ವ ಕಿರೀಟವನ್ನು ಮುಡಿಗೇರಿಸಿಕೊಂಡಿದೆ.
ಈ ಶ್ರೇಷ್ಠ ಸಾಧನೆಗಾಗಿ ಬಿಸಿಸಿಐ 5 ಕೋಟಿ ರೂ. ಬಹುಮಾನವನ್ನು ಘೋಷಿಸಿದ್ದು, ಈ ನಗದು ಬಹುಮಾನವನ್ನು ಆಟಗಾರರು ಹಾಗೂ ಸಿಬ್ಬಂದಿಗಳು ಹಂಚಿಕೊಳ್ಳಲಿದ್ದಾರೆ.
ಭಾರತ ಮಹಿಳಾ U19 (ಪ್ಲೇಯಿಂಗ್ XI): ಜಿ ಕಮಲಿನಿ (ವಿಕೆಟ್ ಕೀಪರ್), ಗೊಂಗಡಿ ತ್ರಿಶಾ, ಸನಿಕಾ ಚಲ್ಕೆ, ನಿಕಿ ಪ್ರಸಾದ್ (ನಾಯಕಿ), ಈಶ್ವರಿ ಅವ್ಸಾರೆ, ಮಿಥಿಲಾ ವಿನೋದ್, ಆಯುಷಿ ಶುಕ್ಲಾ, ಜೋಶಿತಾ ವಿಜೆ, ಶಬ್ನಮ್ ಎಂಡಿ ಶಕಿಲ್, ಪರುಣಿಕಾ ಸಿಸೋಡಿಯಾ, ವೈಷ್ಣವಿ ಶರ್ಮಾ.