ಒಡಿಶಾ, ನ.29(DaijiworldNews/TA): ಕಾಂಗ್ರೆಸ್ ಪಕ್ಷವು ದೇಶದ ವಿರುದ್ಧ ಸಂಚು ರೂಪಿಸುವುದರಲ್ಲಿ ನಿರತವಾಗಿದೆ, ಅಧಿಕಾರವನ್ನು ತಮ್ಮ ಜನ್ಮಸಿದ್ಧ ಹಕ್ಕು ಎಂದು ಪರಿಗಣಿಸುವವರಿಗೆ ಕಳೆದ 10 ವರ್ಷಗಳಲ್ಲಿ ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಸಾಧ್ಯವಾಗಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ನವರ ಸುಳ್ಳು ಮತ್ತು ವದಂತಿಗಳು 50-60 ವರ್ಷಗಳಿಂದ ನಡೆಯುತ್ತಲಿದೆ. ಈಗ ಅವರು ಈ ಅಭಿಯಾನ ತೀವ್ರಗೊಳಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಜಾಗೃತರಾದ ನಾಗರಿಕರಿಗೆ, ಬಿಜೆಪಿ ಕಾರ್ಯಕರ್ತರಿಗೆ, ದೇಶವನ್ನು ಪ್ರೀತಿಸುವವರಿಗೆ ಹಾಗು ಸಂವಿಧಾನವನ್ನು ಗೌರವಿಸುವವರಿಗೆ ಅಂತಹ ಜನರ ಕಾರ್ಯಗಳು, ಉದ್ದೇಶಗಳು ದೊಡ್ಡ ಸವಾಲಾಗುತ್ತಿವೆ ಎಂದು ಮೋದಿ ಹೇಳಿಕೆ ನೀಡಿದ್ಧಾರೆ.
ಒಡಿಶಾ ಉತ್ಸವದಲ್ಲಿ ಒಡಿಯಾ ಪರಂಪರೆ ಮತ್ತು ಹೆಮ್ಮೆಯ ಆ ಭವ್ಯ ಪ್ರದರ್ಶನಗಳು, ಒಡಿಶಾದ ಜನರ ಪ್ರೀತಿ ಮತ್ತು ನಿಕಟತೆ ನನಗೆ ಬಹಳ ಸ್ಮರಣೀಯ ಕ್ಷಣಗಳಾಗಿವೆ ಎಂದು ಮೋದಿ ಹೇಳಿದ್ದಾರೆ.