ಬೆಂಗಳೂರು,ನ.29(DaijiworldNews/AK): ವಿಶ್ವ ಒಕ್ಕಲಿಗ ಮಠದ ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ಎಫ್ಐಅರ್ ದಾಖಲಾಗಿರುವುದು ಖಂಡನೀಯ ಎಂದು ವಿರೋಧ ಪಕ್ಷದ ನಾಯಕ ಅರ್ ಅಶೋಕ ಹೇಳಿದರು.
ಸಯ್ಯದ್ ಅಬ್ಬಾಸ್ ಹೆಸರಿನ ವ್ಯಕ್ತಿ ನೀಡಿರುವ ದೂರಿನನ್ವಯ ಎಫ್ಐಅರ್ ಆಗಿದೆ, ಸಿದ್ದರಾಮಯ್ಯ ಸರ್ಕಾರಕ್ಕೆ ಹಿಂದೂಗಳನ್ನು ಕಂಡರೆ ಅಲರ್ಜಿ, ಒಕ್ಕಲಿಗ ಸ್ವಾಮೀಜಿಯನ್ನು ಎಫ್ಐಆರ್ ಮೂಲಕ ಹೆದರಿಸಿ ಬೆದರಿಸಿ ದಬ್ಬಾಳಿಕೆ ನಡೆಸಲು ಮುಂದಾಗಿದ್ದಾರೆ. ಕೋರ್ಟ್ ಆದೇಶ ಪಾಲಿಸಲ್ಲ, ದೇಶದಲ್ಲಿರುವ ರಸ್ತೆಯೆಲ್ಲ ತಮ್ಮದೇ ಎನ್ನುವ ಮುಸ್ಲಿಂ ನಾಯಕನ ವಿರುದ್ಧ ಯಾಕೆ ಕೇಸ್ ದಾಖಲಾಗಿಲ್ಲ ಎಂದು ಪ್ರಶ್ನಿಸಿದರು.
ಹೈದರಾಬಾದ್ ನಲ್ಲಿ ಪ್ರಚೋದನಾಕಾರಿ ಭಾಷಣ ಮಾಡುವ ಅಸಾದುದ್ದೀನ್ ಒವೈಸಿ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಅಶೋಕ ಪ್ರಶ್ನಿಸಿದರು.