ಹೈದರಾಬಾದ್, ನ.29(DaijiworldNews/TA):ಸಮಂತಾ ರುತ್ ಪ್ರಭು ಅವರ ತಂದೆ ಜೋಸೆಫ್ ಪ್ರಭು ನಿಧನರಾಗಿದ್ದಾರೆ. ನಟಿ ಶುಕ್ರವಾರ ಸಂಜೆ ತನ್ನ ತಂದೆಯ ಮರಣದ ಬಗ್ಗೆ ಹೃದಯಸ್ಪರ್ಶಿ ಪೋಸ್ಟ್ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಮಂತಾ ಅವರು ಮುರಿದ ಹೃದಯದ ಎಮೋಜಿಯೊಂದಿಗೆ ಮತ್ತೆ ನಾವು ಸಿಗುವವರೆಗೆ ಅಪ್ಪ... ಎಂದು ಬರೆದಿದ್ದಾರೆ.
ಸಮಂತಾ ತಂದೆ ಜೋಸೆಫ್ ಪ್ರಭು ಅವರು ತೆಲುಗು ಆಂಗ್ಲೋ ಇಂಡಿಯನ್ ಆಗಿದ್ದರು. ಸಮಂತಾ ಯಶಸ್ಸಿನಲ್ಲಿ ತಂದೆಯ ಕೊಡುಗೆ ಅಪಾರವಾದುದು. ವೃತ್ತಿಜೀವನದಲ್ಲಿ ಹಾಗೂ ವೈಯಕ್ತಿಕ ಬದುಕಿನ ಏಳು-ಬೀಳಿನಲ್ಲಿ ಸಮಂತಾಗೆ ಅವರ ತಂದೆ ಬೆಂಬಲವಾಗಿದ್ದರು.
ಚಿತ್ರರಂಗದಲ್ಲಿ ಸಮಂತಾ ಅವರು ಸ್ಟಾರ್ ನಟಿ ಆಗಿದ್ದು ಸಿನಿಮಾ, ವೆಬ್ ಸಿರೀಸ್, ಜಾಹೀರಾತು, ಪಾಡ್ಕಾಸ್ಟ್ ಮುಂತಾದ ಕ್ಷೇತ್ರದಲ್ಲಿ ಅವರಿಗೆ ಬೇಡಿಕೆ ಇದೆ. ಅನಾರೋಗ್ಯದ ನಡುವೆಯೂ ಕಷ್ಟಪಟ್ಟು, ಸಾಕಷ್ಟು ತಯಾರಿ ಮಾಡಿಕೊಂಡು ಸಮಂತಾ ಅವರು ಈ ಸಿರೀಸ್ನಲ್ಲಿ ನಟಿಸಿದರು. ಅದರ ಯಶಸ್ಸಿನ ಖುಷಿಯಲ್ಲಿ ಇರುವಾಗಲೇ ತಂದೆಯ ನಿಧನದಿಂದ ಅವರಿಗೆ ತೀವ್ರ ನೋವಾಗಿದೆ ಎನ್ನಲಾಗಿದೆ.