ನಗೋಯಾ, ಅ.23 (DaijiworldNews/AA): 2026ರ ಏಷ್ಯನ್ ಪ್ಯಾರಾ ಗೇಮ್ಸ್ನ 5ನೇ ದಿನದಂದು ಭಾರತವು ಆರ್ಚರಿಯಲ್ಲಿ ಮತ್ತೊಂದು ಚಿನ್ನ ಹಾಗೂ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ನಲ್ಲಿ ಚಿನ್ನ, ಬೆಳ್ಳಿ ಪದಕ ತನ್ನದಾಗಿಸಿಕೊಂಡಿದೆ.

ಪುರುಷರ ರಿಕರ್ವ್ ತಂಡದ ಸ್ಪರ್ಧೆಯಲ್ಲಿ ಹರ್ವಿಂದರ್ ಸಿಂಗ್ ಮತ್ತು ವಿಜಯ್ ಸುಂಡಿ ಅವರು ಚೀನಾ ವಿರುದ್ಧ 5-1 ಅಂತರದ ಜಯ ಸಾಧಿಸಿದರು. ಈ ಮೂಲಕ ಪ್ಯಾರಾ ಆರ್ಚರಿಯಲ್ಲಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.
ಪುರುಷರ ಸಿಂಗಲ್ಸ್ SL3 ಬ್ಯಾಡ್ಮಿಂಟನ್ ಫೈನಲ್ನಲ್ಲಿ ನಿತೇಶ್ ಕುಮಾರ್ ಅವರು ಪ್ರಮೋದ್ ಭಗತ್ ಅವರನ್ನು ಸೋಲಿಸಿ ಚಿನ್ನದ ಪದಕವನ್ನು ಗೆದ್ದುಕೊಂಡರು. ಪ್ರಮೋದ್ ಭಗತ್ ಬೆಳ್ಳಿ ಪದಕವನ್ನು ಪಡೆದರು.
ಇದರೊಂದಿಗೆ ಮಹಿಳಾ ಸಿಂಗಲ್ಸ್ SU5 ಬ್ಯಾಡ್ಮಿಂಟನ್ ಫೈನಲ್ನಲ್ಲಿ ತುಳಸಿಮತಿ ಮುರುಗೇಶನ್, ಮಹಿಳಾ ರಿಕರ್ವ್ ಡಬಲ್ಸ್ನಲ್ಲಿ ಪೂಜಾ ಜಾತ್ಯಾನ್ ಮತ್ತು ಭಾವನಾ ಚೌಧರಿ ಹಾಗೂ ಪುರುಷರ 1500 ಮೀಟರ್ ಟಿ46 ಫೈನಲ್ನಲ್ಲಿ ಪ್ರಮೋದ್ ಬೆಳ್ಳಿ ಪದಕಗಳನ್ನು ಗೆದ್ದರು.