ನಗೋಯಾ, ಅ.22 (DaijiworldNews/AA): 2026ರ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಶೀತಲ್ ದೇವಿ ಅವರು ಮಹಿಳೆಯರ ವೈಯಕ್ತಿಕ ಕಾಂಪೌಂಡ್ ವಿಭಾಗದಲ್ಲಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಐಚಿ-ನಗೋಯಾದಲ್ಲಿ ನಡೆಯುತ್ತಿರುವ 5ನೇ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಸಿಂಗಾಪುರದ ನೂರ್ ಸಯಾಹಿದಾ ಅಲಿಮ್ ಅವರನ್ನು 142-139 ಅಂತರದಿಂದ ಸೋಲಿಸಿ ಶೀತಲ್ ದೇವಿ ಅವರು ಚಿನ್ನದ ಪದಕ ಗೆದ್ದಿದ್ದಾರೆ. ಇನ್ನು ಈ ಗೆಲುವಿನೊಂದಿಗೆ ಶೀತಲ್ ದೇವಿ ಅವರು ಈ ಕ್ರೀಡಾಕೂಟದಲ್ಲಿ ತಮ್ಮ ಮೂರನೇ ಪದಕವನ್ನು ಪಡೆದಂತಾಗಿದೆ.
ಇದಕ್ಕೂ ಮುನ್ನ ಅವರು ತೋಮನ್ ಕುಮಾರ್ ಅವರೊಂದಿಗೆ ಕಾಂಪೌಂಡ್ ಮಿಶ್ರ ತಂಡ ವಿಭಾಗದಲ್ಲಿ ಚಿನ್ನ ಗಳಿಸಿದ್ದರು. ಜೊತೆಗೆ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದರು.