ದೆಹಲಿ, ಅ.11 (DaijiworldNews/AA): ಒಂದು ವೇಳೆ ನನಗೆ ಮತ್ತೊಮ್ಮೆ ಭಾರತ ತಂಡ ಪರ ಆಡಲು ಅವಕಾಶ ಸಿಗದಿದ್ದರೆ, ಅದು ನನ್ನ ನಷ್ಟವಲ್ಲ ಎಂದು ಭಾರತೀಯ ಕ್ರಿಕೆಟ್ ತಂಡದ ಹಿರಿಯ ವೇಗಿ ಮೊಹಮ್ಮದ್ ಶಮಿ ಆಯ್ಕೆಗಾರರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಕಲ್ಯಾಣಿಯಲ್ಲಿ ದೆಹಲಿ ವಿರುದ್ಧದ ರಣಜಿ ಟ್ರೋಫಿ ಪಂದ್ಯಾವಳಿಯ ಆರಂಭಕ್ಕೆ ಮುನ್ನ, ಖಾಸಗಿ ವಾಹಿನಿಯೊಂದರಲ್ಲಿ ರಾಷ್ಟ್ರೀಯ ತಂಡದಿಂದ ಅವರನ್ನು ಹೊರಗಿಡಲಾದ ಬಗ್ಗೆ ಮಾತನಾಡಿದ ಅವರು, "ಕಳೆದ ಎರಡು-ಮೂರು ವರ್ಷಗಳಿಂದ ನನ್ನ ವಿಷಯದಲ್ಲಿ ಇದೇ ನಡೆಯುತ್ತಿದೆ. ನಾನು ಬೆಂಗಾಲ್ ಪರ ಪ್ರದರ್ಶನ ನೀಡುತ್ತಿದ್ದೇನೆ ಮತ್ತು ನನ್ನ ಫಿಟ್?ನೆಸ್? ಅನ್ನೂ ಸಾಬೀತುಪಡಿಸಿದ್ದೇನೆ. ಆದರೂ ಅವಕಾಶ ಸಿಗದಿದ್ದರೆ ಅದು ನನ್ನ ನಷ್ಟವಲ್ಲ" ಎಂದಿದ್ದಾರೆ.
"ಭುವನೇಶ್ವರ್ ಕುಮಾರ್ಗೆ ಭಾರತ ತಂಡದಲ್ಲಿ ಆಡಲು ಅವಕಾಶ ಸಿಕ್ಕಿದೆ, ಅದು ಅವರಿಗೆ ಒಳ್ಳೆಯದು. ಆದರೆ ಅವರ ಆಯ್ಕೆಗೂ ನನಗೂ ಯಾವುದೇ ಸಂಬಂಧವಿಲ್ಲ. ನನಗೆ ಎಲ್ಲಿ ಆಡಲು ಅವಕಾಶ ಸಿಗುತ್ತದೆಯೋ, ಅಲ್ಲಿ ನಾನು ನನ್ನ ಅತ್ಯುತ್ತಮ ಪ್ರದರ್ಶನ ನೀಡುತ್ತೇನೆ. ಸದ್ಯಕ್ಕೆ ನನ್ನ ಸಂಪೂರ್ಣ ಗಮನ ಈ ರಣಜಿ ಪಂದ್ಯದ ಮೇಲಿದೆ" ಎಂದು ಹೇಳಿದ್ದಾರೆ.