ಮುಂಬೈ, ಅ.09 (DaijiworldNews/AK):ನವೆಂಬರ್ 8 ರಿಂದ ಓಮನ್ನಲ್ಲಿ ನಡೆಯಲಿರುವ ಅಂಡರ್-19 ಏಷ್ಯಾಕಪ್ ವೇಳಾಪಟ್ಟಿಯನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಪ್ರಕಟಿಸಿದೆ.

ಈ ಪಂದ್ಯಾವಳಿಯಲ್ಲಿ ಎಂಟು ತಂಡಗಳು ಭಾಗವಹಿಸಲಿದ್ದು, ಈ 8 ತಂಡಗಳ ಪಟ್ಟಿಯಲ್ಲಿ ಭಾರತ, ಶ್ರೀಲಂಕಾ, ಮಲೇಷ್ಯಾ, ಯುಎಇ, ಪಾಕಿಸ್ತಾನ, ಅಫ್ಘಾನಿಸ್ತಾನ, ನೇಪಾಳ ಮತ್ತು ಬಾಂಗ್ಲಾದೇಶ ತಂಡಗಳು ಸೇರಿವೆ.
ಲೀಗ್ ಹಂತದಲ್ಲಿಯೇ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ನವೆಂಬರ್ 8 ರಂದು ಮುಖಾಮುಖಿಯಾಗಲಿವೆ . ಮೊದಲ ಪಂದ್ಯ ಶ್ರೀಲಂಕಾ ಮತ್ತು ಮಲೇಷ್ಯಾ ನಡುವೆ ನಡೆಯಲಿದ್ದು, ಇದರೊಂದಿಗೆ ಪಂದ್ಯಾವಳಿಗೆ ಚಾಲನೆ ಸಿಗಲಿದೆ.
19 ವರ್ಷದೊಳಗಿನವರ ಏಷ್ಯಾಕಪ್ ವೇಳಾಪಟ್ಟಿ
ನವೆಂಬರ್ 5: ಶ್ರೀಲಂಕಾ vs ಮಲೇಷ್ಯಾ, ಬಾಂಗ್ಲಾದೇಶ vs ಅಫ್ಘಾನಿಸ್ತಾನ
ನವೆಂಬರ್ 6: ಪಾಕಿಸ್ತಾನ vs ಯುಎಇ, ಭಾರತ vs ನೇಪಾಳ
ನವೆಂಬರ್ 7: ಅಫ್ಘಾನಿಸ್ತಾನ vs ಮಲೇಷ್ಯಾ, ಶ್ರೀಲಂಕಾ vs ಬಾಂಗ್ಲಾದೇಶ
ನವೆಂಬರ್ 8: ಯುಎಇ vs ನೇಪಾಳ, ಭಾರತ vs ಪಾಕಿಸ್ತಾನ
ನವೆಂಬರ್ 9: ಬಾಂಗ್ಲಾದೇಶ vs ಮಲೇಷ್ಯಾ, ಶ್ರೀಲಂಕಾ vs ಅಫ್ಘಾನಿಸ್ತಾನ
ನವೆಂಬರ್ 10: ಭಾರತ vs ಯುಎಇ, ಪಾಕಿಸ್ತಾನ vs ನೇಪಾಳ
ನವೆಂಬರ್ 12: ಸೆಮಿಫೈನಲ್ ಸುತ್ತು; A1 vs B2, B1 vs A2
ನವೆಂಬರ್ 14: ಫೈನಲ್