ನವದೆಹಲಿ, ಅ.07 (DaijiworldNews/AK): ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಸ್ಥಾನಕ್ಕೆ ಹರ್ಮನ್ಪ್ರೀತ್ ಕೌರ್ ರಾಜೀನಾಮೆ ನೀಡಿದ ಬೆನ್ನಲ್ಲೇ, ಭಾರತೀಯ ಡ್ರೆಸ್ಸಿಂಗ್ ರೂಮ್ನಲ್ಲಿ ಎಲ್ಲವೂ ಸರಿಯಿಲ್ಲ ಹಾಗೂ ಹರ್ಮನ್ಪ್ರೀತ್ ಮತ್ತು ಮಂಧಾನ ನಡುವೆ ತೀವ್ರ ಶೀತಲ ಸಮರ ನಡೆಯುತ್ತಿರುವ ಸ್ಫೋಟಕ ವಿಚಾರ ಹೊರ ಬಿದ್ದಿದೆ.

ಸಿಸಿಐ ನಡೆಸಿದ ಮಹತ್ವದ ಪರಾಮರ್ಶನಾ ಸಭೆಯ ಬಳಿಕ 37 ವರ್ಷದ ಹರ್ಮನ್ಪ್ರೀತ್ ಕೌರ್ ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರ ಪ್ರಕಟಿಸಿದ್ದಾರೆ. ಜಪಾನ್ನಲ್ಲಿ ನಡೆದ ಏಷ್ಯನ್ ಗೇಮ್ಸ್ನಲ್ಲಿಭಾರತಕ್ಕೆ ಸತತ ಎರಡನೇ ಚಿನ್ನದ ಪದಕ ಗೆದ್ದುಕೊಟ್ಟ ಹೆಗ್ಗಳಿಕೆಯೊಂದಿಗೆ ಅವರು ನಾಯಕತ್ವಕ್ಕೆ ವಿದಾಯ ಹೇಳಿದ್ದಾರೆ.
ರಾಜೀನಾಮೆ ಬೆನ್ನಲ್ಲೇ 30 ವರ್ಷದ ಎಡಗೈ ಬ್ಯಾಟರ್ ಸ್ಮೃತಿ ಮಂಧಾನ ಅವರ ಹೆಗಲಿಗೆ ನಾಯಕತ್ವದ ಹೊಣೆಗಾರಿಕೆ ಬಂದಿದೆ. ಆದರೆ ಈ ನಾಯಕತ್ವದ ಪಟ್ಟ ಮಂಧಾನಗೆ ಸಿಗುವುದು ಸಾಕಷ್ಟು ತಡವಾಯಿತೇ ಎಂಬ ಚರ್ಚೆಯೂ ಕ್ರಿಕೆಟ್ ವಲಯದಲ್ಲಿ ಶುರುವಾಗಿದೆ.
ಈ ಹಿಂದೆ ಉತ್ತಮ ಒಡನಾಟ ಹೊಂದಿದ್ದ ಹರ್ಮನ್ಪ್ರೀತ್ ಮತ್ತು ಮಂಧಾನ ನಡುವೆ ನಾಯಕತ್ವದ ವಿಚಾರವೇ ದೊಡ್ಡ ಬಿರುಕಿಗೆ ಕಾರಣವಾಗಿದೆ ಎಂದು ಬಿಸಿಸಿಐ ಮೂಲವನ್ನು ಆಧಾರಿಸಿ ಮಾಧ್ಯಮ ವರದಿ ಮಾಡಿದೆ.