ನಗೋಯಾ, ಅ.02 (DaijiworldNews/AA): ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳೆಯರ ರಿಕರ್ವ್ ಆರ್ಚರಿಯಲ್ಲಿ ಹಾಗೂ ಮಹಿಳೆಯರ 75 ಕೆಜಿ ಬಾಕ್ಸಿಂಗ್ ಫೈನಲ್ನಲ್ಲಿ ಭಾರತ ಚಿನ್ನದ ಪದಕ ತನ್ನದಾಗಿಸಿಕೊಂಡಿದೆ.

ಐಚಿ ನಗೋಯಾದಲ್ಲಿ ನಡೆಯುತ್ತಿರುವ 20ನೇ ಏಷ್ಯನ್ ಗೇಮ್ಸ್ನ ಮಹಿಳೆಯರ ರಿಕರ್ವ್ ಆರ್ಚರಿ ವಿಭಾಗದಲ್ಲಿ ಭಾರತ ತಂಡವು ದೇಶದ ಇತಿಹಾಸದಲ್ಲೇ ಮೊದಲ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದೆ. ಅಂಕಿತಾ ಭಕತ್, ಕೀರ್ತಿ ಶರ್ಮಾ ಮತ್ತು ಕುಮ್ಕುಮ್ ಅನಿಲ್ ಮೊಹದ್ ಅವರನ್ನು ಒಳಗೊಂಡ ಭಾರತೀಯ ತಂಡವು 10 ಬಾರಿ ಚಾಂಪಿಯನ್ ಆಗಿದ್ದ ದಕ್ಷಿಣ ಕೋರಿಯಾವನ್ನು 5-3 ಅಂತರದಿಂದ ಸೋಲಿಸಿ, ಚಿನ್ನದ ಪದಕ ಗೆದ್ದಿದೆ.
ಏಷ್ಯನ್ ಗೇಮ್ಸ್ನ ಮಹಿಳೆಯರ 75 ಕೆಜಿ ಬಾಕ್ಸಿಂಗ್ ವಿಭಾಗದ ಫೈನಲ್ನಲ್ಲಿ ಚೀನಾದ ಬಾಲ್ ಝಿಯಾ ವಿರುದ್ಧ ಭಾರತದ ಲವ್ಲಿನಾ ಬೊರ್ಗೊಹೈನ್ ಉತ್ತಮ ಪ್ರದರ್ಶನ ನೀಡಿ, ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಮೊದಲ ರೌಂಡ್ನಲ್ಲಿ ಚೀನಾದ ಬಾಲ್ ಝಿಯಾ ಮುನ್ನಡೆ ಸಾಧಿಸಿದರು. ಆದರೆ ಲವ್ಲಿನಾ ಅವರು ಅಂತಿಮ ಹಂತದಲ್ಲಿ 5-0 ಅಂತರದಿಂದ, ಗೆಲುವು ತಮ್ಮದಾಗಿಸಿಕೊಂಡರು.
ಈ ಮೂಲಕ ಭಾರತದ ಒಟ್ಟು ಪದಕಗಳ ಸಂಖ್ಯೆ 70ಕ್ಕೆ ಏರಿಕೆಯಾಗಿದೆ. ಇದರಲ್ಲಿ 12 ಚಿನ್ನ, 24 ಬೆಳ್ಳಿ ಹಾಗೂ 34 ಕಂಚಿನ ಪದಕಗಳು ಸೇರಿವೆ.