ನಿಸ್ಶಿನ್, ಅ.01 (DaijiworldNews/AK): ಏಷ್ಯನ್ ಗೇಮ್ಸ್ 2026ರ ಸೆಮಿಫೈನಲ್ನಲ್ಲಿ ಶ್ರೀಲಂಕಾ ವಿರುದ್ಧ ಸುಲಭ ಜಯ ಸಾಧಿಸಿದ ಭಾರತ ತಂಡ ಫೈನಲ್ಗೆ ಪ್ರವೇಶಿಸಿದ್ದು, ಪಾಕಿಸ್ತಾನ ವಿರುದ್ಧ ಫೈನಲ್ ಪಂದ್ಯದಲ್ಲಿ ಶನಿವಾರ ಚಿನ್ನದ ಪದಕಕ್ಕಾಗಿ ಭಾರತ ಸೆಣಸಲಿದೆ.

ಸಾಂಪ್ರದಾಯಿಕ ಎದುರಾಳಿಗಳ ನಡುವಣ ಈ ಪಂದ್ಯವು ಭಾರತೀಯ ಕಾಲಮಾನ (IST) ಬೆಳಗ್ಗೆ 10 ಗಂಟೆಗೆ ಶುರುವಾಗಲಿದೆ. ಇನ್ನು ಟಾಸ್ ಪ್ರಕ್ರಿಯೆ ಬೆಳಗ್ಗೆ 9:30 ಕ್ಕೆ ನಡೆಯಲಿದೆ. ಭಾರತ ಮತ್ತು ಪಾಕಿಸ್ತಾನ್ ನಡುವಣ ಫೈನಲ್ ಪಂದ್ಯಕ್ಕೆ ಜಪಾನ್ನ ಕೊರೊಗಿ ಸ್ಪೋರ್ಟ್ಸ್ ಪಾರ್ಕ್ ಕ್ರಿಕೆಟ್ ಮೈದಾನ ಆತಿಥ್ಯವಹಿಸಲಿದೆ.
ಭಾರತ ಟಿ20 ತಂಡ: ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪಾನಯಕ), ರವಿ ಬಿಷ್ಣೋಯ್, ಅಭಿಷೇಕ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ, ಜಸ್ಪ್ರೀತ್ ಬುಮ್ರಾ, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಯಶ್ ಠಾಕೂರ್, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಶಿವಂ ದುಬೆ, ವಿಪ್ರಾಜ್ ನಿಗಮ್, ವೈಭವ್ ಸೂರ್ಯವಂಶಿ.
ಪಾಕಿಸ್ತಾನ್ ಟಿ20 ತಂಡ: ಸಾಹಿಬ್ಝಾದ ಫರ್ಹಾನ್ (ನಾಯಕ), ಅಬ್ದುಲ್ ಸಮದ್ (ಉಪನಾಯಕ), ಸೈಮ್ ಅಯೂಬ್, ಹೈದರ್ ಅಲಿ, ಹಸನ್ ನವಾಝ್, ಸಾದ್ ಮಸೂದ್, ಉಸ್ಮಾನ್ ಖಾನ್ (ವಿಕೆಟ್ ಕೀಪರ್), ಅರಾಫತ್ ಮಿನ್ಹಾಸ್, ಮಾಝ್ ಸದಾಕತ್, ಅಬ್ರಾರ್ ಅಹ್ಮದ್, ಸುಫ್ಯಾನ್ ಮುಖೀಮ್, ಅಹ್ಮದ್ ದಾನಿಯಾಲ್, ಆಕಿಫ್ ಜಾವೇದ್, ಅಲಿ ರಾಝ, ಮೊಹಮ್ಮದ್ ಸಲ್ಮಾನ್ ಮಿರ್ಝ.