ಜಪಾನ್, ಸೆ.29 (DaijiworldNews/AA): ಜಪಾನ್ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ನಲ್ಲಿ ಮಂಗಳವಾರ ನಡೆದ ಮಹಿಳೆಯರ 4×400 ಮೀಟರ್ಸ್ ರಿಲೇಯಲ್ಲಿ ಭಾರತೀಯ ವನಿತೆಯರ ಪಡೆ ಚಿನ್ನದ ಪದಕ ಗೆದ್ದಿದೆ.

ಸಾಲು ಸಾಲು ಬೆಳ್ಳಿ ಮತ್ತು ಕಂಚಿನ ಪದಕಗಳಿಗೆ ತೃಪ್ತಿಪಟ್ಟುಕೊಂಡಿದ್ದ ಭಾರತೀಯ ಅಥ್ಲೆಟಿಕ್ಸ್ ಪಡೆ ಕೊನೆಗೂ ಚಿನ್ನದ ಪದಕದ ಖಾತೆ ತೆರೆದಿದೆ. ವಿತ್ಯಾ ರಾಮ್ರಾಜ್, ಕಿರಣ್ ಪಹಲ್, ಮಾಚೆಟ್ಟಿರ ಪೂವಮ್ಮ ಹಾಗೂ ಪ್ರಾಚಿ ಅವರನ್ನೊಳಗೊಂಡ ಭಾರತೀಯ ನಾಲ್ವರ ಮಹಿಳಾ ತಂಡವು 3 ನಿಮಿಷ 29.69 ಸೆಕೆಂಡುಗಳಲ್ಲಿ ಗುರಿ ತಲುಪಿ ಅಗ್ರಸ್ಥಾನದೊಂದಿಗೆ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಮಹಿಳೆಯರ ಪಡೆ ಏಷ್ಯನ್ ಗೇಮ್ಸ್ನಲ್ಲಿ ದೇಶಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟಿದೆ.
3 ನಿಮಿಷ 30.21 ಸೆಕೆಂಡುಗಳಲ್ಲಿ ಗುರಿ ತಲುಪಿ ಬಹ್ರೇನ್ ತಂಡ ಬೆಳ್ಳಿ ಪದಕವನ್ನು ಪಡೆಯಿತು. ಹಾಗೂ 3 ನಿಮಿಷ 31.02 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಆತಿಥೇಯ ಚೀನಾ ತಂಡವು ಕಂಚಿನ ಪದಕವನ್ನು ಗೆದ್ದುಕೊಂಡಿತು.