ದೆಹಲಿ, ಸೆ.29 (DaijiworldNews/AA): ವಿರಾಟ್ ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಂಡಾಗ ಅವರು ಮಾಡಿದ ಸಾಧನೆ ನಿಜಕ್ಕೂ ಅದ್ಭುತ. ನಾನು ಕೊಹ್ಲಿ ಅವರ ಟೆಸ್ಟ್ ನಾಯಕತ್ವದ ದೊಡ್ಡ ಅಭಿಮಾನಿ ಎಂದು ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ತಿಳಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, "ವಿರಾಟ್ ಕೊಹ್ಲಿ ಭಾರತೀಯ ಟೆಸ್ಟ್ ತಂಡವನ್ನು ಮುನ್ನಡೆಸಿದ ರೀತಿ ಅದ್ಭುತವಾಗಿತ್ತು. ಕೊಹ್ಲಿ ತಂಡದಲ್ಲಿ ತಂದ ಆಕ್ರಮಣಕಾರಿ ಶೈಲಿ, ಫಿಟ್ನೆಸ್ ಕ್ರಾಂತಿ ಮತ್ತು ವಿದೇಶಿ ಮಣ್ಣಿನಲ್ಲಿ ಗೆಲ್ಲಲೇಬೇಕೆಂಬ ಹಠ ಭಾರತೀಯ ಕ್ರಿಕೆಟ್ನ ಚಿತ್ರಣವನ್ನೇ ಬದಲಾಯಿಸಿತು" ಎಂದು ಹೇಳಿದ್ದಾರೆ.
"ನಮ್ಮಿಬ್ಬರ ವೈಯಕ್ತಿಕ ಆಟವನ್ನು ಇನ್ನಷ್ಟು ಉತ್ತಮಗೊಳಿಸುವುದು ಹೇಗೆ ಎಂಬ ಬಗ್ಗೆ ನಮ್ಮ ನಡುವೆ ಸಾಕಷ್ಟು ಸುದೀರ್ಘ ಚರ್ಚೆಗಳು ನಡೆಯುತ್ತವೆ. ಒಬ್ಬರ ಬ್ಯಾಟಿಂಗ್ನಲ್ಲಿ ಏನಾದರೂ ತಾಂತ್ರಿಕ ಲೋಪದೋಷಗಳು ಕಂಡುಬಂದರೆ, ಅದನ್ನು ಮುಕ್ತವಾಗಿ ಹಂಚಿಕೊಂಡು ಸರಿಪಡಿಸಿಕೊಳ್ಳುವ ಅಪೂರ್ವ ಒಡನಾಟ ನಮ್ಮಲ್ಲಿದೆ" ಎಂದಿದ್ದಾರೆ.