ನಗೋಯಾ, ಸೆ.29 (DaijiworldNews/AK): ಜಪಾನ್ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2026ರ ಪುರುಷರ ಟಿ20 ಟೂರ್ನಿಯು ಅಂತಿಮ ಹಂತಕ್ಕೆ ಬಂದು ನಿಂತಿದೆ.

ಈಗಾಗಲೇ 4 ತಂಡಗಳು ಟೂರ್ನಿಯಿಂದ ಹೊರಬಿದ್ದರೆ, ಮತ್ತೆ ನಾಲ್ಕು ತಂಡಗಳು ಸೆಮಿಫೈಮಲ್ಗೆ ಲಗ್ಗೆಯಿಟ್ಟಿದೆ. ಅದು ಸಹ ಪಂದ್ಯವಾಡದೇ ಎಂಬುದು ವಿಶೇಷ. ಅಂದರೆ ಕ್ವಾರ್ಟರ್ ಫೈನಲ್ನ ನಾಲ್ಕೂ ಮ್ಯಾಚ್ಗಳೂ ಕೂಡ ಮಳೆಗೆ ಆಹುತಿಯಾಗಿದೆ. ಹೀಗಾಗಿ ಐಸಿಸಿ ರ್ಯಾಂಕಿಂಗ್ನಲ್ಲಿ ಉನ್ನತ ಸ್ಥಾನ ಹೊಂದಿರುವ 4 ತಂಡಗಳು ಸೆಮಿಫೈನಲ್ಗೆ ಪ್ರವೇಶಿಸಿದೆ.
ಸೆಮಿಫೈನಲ್ಗೆ ಪ್ರವೇಶಿಸಿದ ತಂಡಗಳು: ಭಾರತ, ಪಾಕಿಸ್ತಾನ್ , ಬಾಂಗ್ಲಾದೇಶ್, ಶ್ರೀಲಂಕಾ.
ಸೆಮಿಫೈನಲ್ ವೇಳಾಪಟ್ಟಿ:
ಎರಡೂ ಸೆಮಿಫೈನಲ್ ಪಂದ್ಯಗಳು ಅಕ್ಟೋಬರ್ 1, 2026ರ ಗುರುವಾರದಂದು ಐಚಿಯ ನಿಸ್ಸಿನ್ನಲ್ಲಿರುವ ಕೊರೊಗಿ ಸ್ಪೋರ್ಟ್ಸ್ ಪಾರ್ಕ್ನಲ್ಲಿ ನಡೆಯಲಿವೆ. ಈ ಪಂದ್ಯಗಳಲ್ಲಿ ಮುಖಾಮುಖಿಯಾಗಲಿರುವ ತಂಡಗಳ ವಿವರ ಈ ಕೆಳಗಿನಂತಿದೆ…
ಪಂದ್ಯ ಮುಖಾಮುಖಿ ತಂಡಗಳು ಸಮಯ (ಭಾರತೀಯ ಕಾಲಮಾನ – IST)
ಸೆಮಿಫೈನಲ್ 1 ಪಾಕಿಸ್ತಾನ್ vs ಬಾಂಗ್ಲಾದೇಶ್ ಬೆಳಗ್ಗೆ 5:30 ಕ್ಕೆ
ಸೆಮಿಫೈನಲ್ 2 ಭಾರತ vs ಶ್ರೀಲಂಕಾ ಬೆಳಗ್ಗೆ 10:30 ಕ್ಕೆ
ಸೆಮಿಫೈನಲ್ ಪಂದ್ಯಗಳಲ್ಲಿ ಜಯಭೇರಿ ಬಾರಿಸುವ ಎರಡು ತಂಡಗಳು ಅಕ್ಟೋಬರ್ 3 ರಂದು ನಡೆಯಲಿರುವ ಹೈ-ವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಚಿನ್ನದ ಪದಕಕ್ಕಾಗಿ ಕಾದಾಡಲಿದೆ. ಅದೇ ದಿನ ಸೆಮಿಫೈನಲ್ನಲ್ಲಿ ಸೋತ ಎರಡು ತಂಡಗಳ ನಡುವೆ ಕಂಚಿನ ಪದಕಕ್ಕಾಗಿ ಪಂದ್ಯ ನಡೆಯಲಿದೆ.
ಭಾರತ ಟಿ20 ತಂಡ: ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪಾನಯಕ), ರವಿ ಬಿಷ್ಣೋಯ್, ಅಭಿಷೇಕ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ, ಜಸ್ಪ್ರೀತ್ ಬುಮ್ರಾ, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಯಶ್ ಠಾಕೂರ್, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಶಿವಂ ದುಬೆ, ವಿಪ್ರಾಜ್ ನಿಗಮ್, ವೈಭವ್ ಸೂರ್ಯವಂಶಿ.
ಶ್ರೀಲಂಕಾ ಟಿ20 ತಂಡ: ಆಶೆನ್ ಬಂಡಾರ , ನುವಾನಿಡು ಫೆರ್ನಾಂಡೊ , ಚಾಮಿಕಾ ಕರುಣರತ್ನೆ , ನುವಾನ್ ತುಷಾರ , ಲಸಿತ್ ಕ್ರೂಸ್ಪುಲ್ಲೆ , ದುಶಾನ್ ಹೇಮಂತ , ಸಿನೆತ್ ಜಯವರ್ಧನೆ , ನಿರೋಷನ್ ಡಿಕ್ವೆಲ್ಲಾ , ಸೋಹನ್ ಡಿ ಲಿವೇರಾ , ತರಿಂದು ರತ್ನಾಯಕೆ , ಬಿನುರ ಫೆರ್ನಾಂಡೊ , ಗರುಕ ಸಂಕೇತ್ , ಸಹನ್ ಅರಚ್ಚಿಗೆ (ನಾಯಕ) , ವನುಜಾ ಸಹನ್ , ವಿಜಯಕಾಂತ್ ವಿಯಸ್ಕಾಂತ್.