ನಗೋಯಾ, ಸೆ.28 (DaijiworldNews/AK):ಏಷ್ಯನ್ ಗೇಮ್ಸ್ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಭಾರತೀಯ ಮಹಿಳಾ ಶೂಟರ್ ಇಂದು ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಒಟ್ಟು ಪದಕಗಳ ಸಂಖ್ಯೆ 38ಕ್ಕೆ ಏರಿಸಿದ್ದಾರೆ.

ಸೋಮವಾರ (ಸೆಪ್ಟೆಂಬರ್ 28) ನಡೆದ ಮಹಿಳೆಯರ 25 ಮೀಟರ್ ಪಿಸ್ತೂಲ್ ವಿಭಾಗದಲ್ಲಿ ಭಾರತದ ಶೂಟರ್ ಇಶಾ ಸಿಂಗ್ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಸತತ 5 ‘ಶೂಟ್-ಆಫ್’ (ನಿರ್ಣಾಯಕ ಸುತ್ತು) ಹಂತಗಳನ್ನ ಎದುರಿಸಿದ ಇಶಾ, ಬೆಳ್ಳಿ ಪದಕ ಗೆದ್ದುಕೊಂಡರು.
ಹೈದರಾಬಾದ್ ಮೂಲದ 21 ವರ್ಷದ ಶೂಟರ್ ಇಶಾ, ಅರ್ಹತಾ ಸುತ್ತಿನಲ್ಲಿ 580 ಅಂಕಗಳು ಮತ್ತು 22 ‘X’ ಗಳೊಂದಿಗೆ 8ನೇ ಸ್ಥಾನ ಪಡೆಯುವ ಮೂಲಕ ಫೈನಲ್ಗೆ ಪ್ರವೇಶಿಸಿದ್ದರು. ಫೈನಲ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಚಿನ್ನದ ಪದಕವನ್ನೇ ಗೆಲ್ಲುವ ಭರವಸೆ ಮೂಡಿಸಿದ್ದರು. ದುರದೃಷ್ಟವಶಾತ್ ಕೇವಲ ಒಂದು ಶಾಟ್ ಅಂತರದಿಂದ ಚಿನ್ನದ ಪದಕ ಕೈತಪ್ಪಿತು.