ನವದೆಹಲಿ, ಆ. 27 (DaijiworldNews/TA): ಆಸ್ಟ್ರೇಲಿಯಾ ಅಂಡರ್-19 ತಂಡದ ಭಾರತ ಪ್ರವಾಸಕ್ಕೆ ಬಿಸಿಸಿಐ ಎರಡು ಭಾರತ U19 ತಂಡಗಳನ್ನು ಪ್ರಕಟಿಸಿದೆ. ಸೆಪ್ಟೆಂಬರ್ 18ರಿಂದ ಆರಂಭವಾಗಲಿರುವ ಪ್ರವಾಸದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಯುವ ತಂಡಗಳ ನಡುವೆ ಮೂರು ಏಕದಿನ ಹಾಗೂ ಎರಡು ಬಹುದಿನಗಳ ಪಂದ್ಯಗಳು ನಡೆಯಲಿವೆ.

ಈ ಸರಣಿಯ ಪ್ರಮುಖ ಆಕರ್ಷಣೆಯಾಗಿರುವುದು ಟೀಂ ಇಂಡಿಯಾದ ಮಾಜಿ ತಾರೆಯರಾದ ವೀರೇಂದ್ರ ಸೆಹ್ವಾಗ್ ಮತ್ತು ರಾಹುಲ್ ದ್ರಾವಿಡ್ ಅವರ ಪುತ್ರರಿಗೆ ಭಾರತ U19 ಏಕದಿನ ತಂಡದಲ್ಲಿ ಸ್ಥಾನ ದೊರೆತಿರುವುದು. ಸೆಹ್ವಾಗ್ ಪುತ್ರ ಆರ್ಯವೀರ್ ಸೆಹ್ವಾಗ್ ಬ್ಯಾಟರ್ ಆಗಿ ಆಯ್ಕೆಯಾಗಿದ್ದರೆ, ದ್ರಾವಿಡ್ ಪುತ್ರ ಅನ್ವಯ್ ದ್ರಾವಿಡ್ ವಿಕೆಟ್ಕೀಪರ್ ಆಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಏಕದಿನ ಸರಣಿಯಲ್ಲಿ ಲಕ್ಷ್ಯ ರಾಯ್ಚಂದಾನಿ ಭಾರತ ತಂಡದ ನಾಯಕತ್ವ ವಹಿಸಲಿದ್ದು, ಯಶವರ್ಧನ್ ಚೌಹಾಣ್ ಉಪನಾಯಕನಾಗಿದ್ದಾರೆ. ಬಹುದಿನಗಳ ಪಂದ್ಯಗಳಲ್ಲಿ ನಾಯಕತ್ವದ ಜವಾಬ್ದಾರಿ ಯಶವರ್ಧನ್ ಚೌಹಾಣ್ ಅವರ ಹೆಗಲೇರಿದ್ದು, ಲಕ್ಷ್ಯ ರಾಯ್ಚಂದಾನಿ ಉಪನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ.
ಭಾರತ U19 ಏಕದಿನ ತಂಡ : ಲಕ್ಷ್ಯ ರಾಯ್ಚಂದಾನಿ (ನಾಯಕ), ಯಶವರ್ಧನ್ ಚೌಹಾಣ್ (ಉಪನಾಯಕ), ರಜತ್ ಬಾಘೆಲ್ (ವಿಕೆಟ್ಕೀಪರ್), ಆರ್ಯವೀರ್ ಸೆಹ್ವಾಗ್, ವಿ.ಕೆ. ವಿನೀತ್, ಕುಶಾಗ್ರ ಓಜಾ, ಅರ್ಜುನ್ ರಜಪೂತ್, ಮನಲ್ ಚೌಹಾಣ್, ಅನ್ವಯ್ ದ್ರಾವಿಡ್ (ವಿಕೆಟ್ಕೀಪರ್), ವಿ. ಯಶ್ವೀರ್, ರೋಹಿತ್ ಯಾದವ್, ಶವಿನ್ ವಿನೋದ್, ಮೋಹಿತ್ ಉಲ್ವಾ, ಚಿಗುರುಪತಿ ವೆಂಕಟ ಹಾಗೂ ಕಾವ್ಯಾ ಪಟೇಲ್.
ಬಹುದಿನಗಳ ಪಂದ್ಯಗಳಿಗೆ ಭಾರತ U19 ತಂಡ : ಯಶವರ್ಧನ್ ಚೌಹಾಣ್ (ನಾಯಕ), ಲಕ್ಷ್ಯ ರಾಯ್ಚಂದಾನಿ (ಉಪನಾಯಕ), ಸಾಗರ್ ವಿರ್ಕ್, ಕುಶಾಗ್ರ ಓಜಾ, ಮನಲ್ ಚೌಹಾಣ್, ಕುಶ್ ಪಟೇಲ್, ಮಾನವ್ ಕೃಷ್ಣ (ವಿಕೆಟ್ಕೀಪರ್), ಅಭಿಪ್ರಯ್ ಸಿಂಗ್ ಬಿಸ್ವಾಸ್ (ವಿಕೆಟ್ಕೀಪರ್), ರೋಹಿತ್ ಯಾದವ್, ಇಶಾನ್ ಓಂ, ಅಯಾನ್ ಅಕ್ರಮ್, ಪ್ರಣವ್ ರಾಘವೇಂದ್ರ, ಪ್ರಿಯಾಂಶು ಸಿಂಗ್, ಮೋಹಿತ್ ಉಲ್ವಾ ಹಾಗೂ ಆರ್ಯನ್ ಯಾದವ್.
ಭಾರತ U19 vs ಆಸ್ಟ್ರೇಲಿಯಾ U19: ವೇಳಾಪಟ್ಟಿ
ಏಕದಿನ ಸರಣಿ :
ಸೆಪ್ಟೆಂಬರ್ 19: ಮೊದಲ ಏಕದಿನ – ರಾಜ್ಕೋಟ್
ಸೆಪ್ಟೆಂಬರ್ 21: ಎರಡನೇ ಏಕದಿನ – ರಾಜ್ಕೋಟ್
ಸೆಪ್ಟೆಂಬರ್ 23: ಮೂರನೇ ಏಕದಿನ – ರಾಜ್ಕೋಟ್
ಬಹುದಿನಗಳ ಸರಣಿ
ಸೆಪ್ಟೆಂಬರ್ 27–30: ಮೊದಲ ಪಂದ್ಯ – ರಾಜ್ಕೋಟ್
ಅಕ್ಟೋಬರ್ 5–8:ಎರಡನೇ ಪಂದ್ಯ – ಅಹಮದಾಬಾದ್
ಸೆಹ್ವಾಗ್ ಮತ್ತು ದ್ರಾವಿಡ್ ಅವರ ಪುತ್ರರು ಭಾರತ U19 ತಂಡದಲ್ಲಿ ಸ್ಥಾನ ಪಡೆದಿರುವ ಹಿನ್ನೆಲೆಯಲ್ಲಿ, ಆಸ್ಟ್ರೇಲಿಯಾ ವಿರುದ್ಧದ ಈ ಯುವ ಸರಣಿಯ ಮೇಲೆ ಕ್ರಿಕೆಟ್ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ.