ಚೆನ್ನೈ, ಆ. 25 (DaijiworldNews/AA): ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ ಕೆ) ತಂಡದ ಹಿರಿಯ ಆಟಗಾರ ಮಹೇಂದ್ರ ಸಿಂಗ್ ಧೋನಿ ಇದೀಗ ಫ್ರಾಂಚೈಸಿ ಬಿಟ್ಟು ಹೊರಬರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

2008 ರಲ್ಲಿ ನಡೆದ ಐಪಿಎಲ್ ಉದ್ಘಾಟನಾ ಆವೃತ್ತಿಯಿಂದಲೂ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯೊಂದಿಗೆ ಸಂಬಂಧ ಹೊಂದಿದ್ದಾರೆ. 2007ರ ಟಿ20 ವಿಶ್ವಕಪ್ ಗೆಲುವಿನ ರುವಾರಿಯಾಗಿದ್ದ ಧೋನಿ ಅವರನ್ನು ಮೊದಲ ಆವೃತ್ತಿಯಲ್ಲೇ 6 ಕೋಟಿ ರೂಪಾಯಿ ನೀಡಿ ಸಿಎಸ್ಕೆ ಫ್ರಾಂಚೈಸಿ ಖರೀದಿಸಿತ್ತು.
ಅಂದಿನಿಂದ ಇಂದಿನವರೆಗೂ ಧೋನಿ ಸಿಎಸ್ಕೆ ಫ್ರಾಂಚೈಸಿಯಲ್ಲೇ ಇದ್ದಾರೆ. ಆದರೆ ಇದೀಗ ಸಿಎಸ್ಕೆ ಹಾಗೂ ಧೋನಿ ಅವರ ನಡುವೆ ಬಿರುಕು ಉಂಟಾಗಿದ್ದು, ಫ್ರಾಂಚೈಸಿಯನ್ನೇ ತೊರೆಯುವ ಸಾಧ್ಯತೆಗಳಿಗೆ ಎನ್ನಲಾಗಿದೆ.
ತಮ್ಮ ವೃತ್ತಿಜೀವನದ ಅಂತ್ಯದಲ್ಲಿರುವ ಧೋನಿ, ಸಿಎಸ್ಕೆ ಫ್ರಾಂಚೈಯ ಪಾಲನ್ನು ಖರೀದಿಸುವ ಮೂಲಕ ಸಿಎಸ್ಕೆ ಫ್ರಾಂಚೈಸಿ ಜೊತೆಗಿನ ಸಂಬಂಧವನ್ನು ಮುಂದುವರಿಸಲು ಬಯಸಿದ್ದರು. ಆದರೆ ಸಿಎಸ್ಕೆ ಆಡಳಿತ ಮಂಡಳಿಯು ಧೋನಿ ಅವರ ಷರತ್ತುಗಳಿಗೆ ಒಪ್ಪದ ಹಿನ್ನೆಲೆ ಫ್ರಾಂಚೈಸಿಯ ಷೇರು ಖರೀದಿ ಒಪ್ಪಂದವು ಮುರಿದುಬಿದ್ದಿದೆ ಹೀಗಾಗಿ ಧೋನಿ ಸಿಎಸ್ಕೆ ಫ್ರಾಂಚೈಸಿ ಬಿಟ್ಟು ಹೊರಬರುವ ಸಾಧ್ಯತೆಯಿದೆ.