ಮುಂಬೈ, ಜೂ. 12 (DaijiworldNews/AA): ಎಲ್ಲಾ ಆಟಗಾರರನ್ನು ವೈಭವ್ ಸೂರ್ಯವಂಶಿಗೆ ಹೋಲಿಕೆ ಮಾಡುವುದು ಸರಿಯಲ್ಲ. ವೈಭವ್ ಒಬ್ಬ ಅಪರೂಪದ ಆಟಗಾರ ಎಂದು ಟೀಂ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ ಹೇಳಿದ್ದಾರೆ.

ಮಹಾರಾಜ ಟಿ20 ಟ್ರೋಫಿ ಅನಾವರಣ ಕಾರ್ಯಕ್ರಮದಲ್ಲಿ ವೈಭವ್ ಸೂಯವಂಶಿಯಂತಹ ಆಟಗಾರರು ಕರ್ನಾಟಕದಲ್ಲೂ ಹುಟ್ಟಿಕೊಳ್ತಾರಾ ಎಂಬ ಪ್ರಶ್ನೆಯನ್ನ ಪತ್ರಕರ್ತರೊಬ್ಬರು ಅವರಿಗೆ ಕೇಳಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿದ ಅವರು, "ಸಚಿನ್ ತೆಂಡೂಲ್ಕರ್ ಬಳಿಕ 15 ವರ್ಷಕ್ಕೆ ಅಂತರರಾಷ್ಟ್ರೀಯ ಕ್ರಿಕೆಟ್?ಗೆ ಪಾದಾರ್ಪಣೆ ಮಾಡಿದ ಆಟಗಾರ ವೈಭವ್. ಸಚಿನ್ ರೀತಿ ಮತ್ತೊಬ್ಬ ಆಟಗಾರ 15 ವರ್ಷಕ್ಕೆ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಲು 40 ವರ್ಷಗಳು ಬೇಕಾಯ್ತು" ಎಂದಿದ್ದಾರೆ.
"ಹೀಗಾಗಿ ಮತ್ತೆ 40 ವರ್ಷ ಆದ ಬಳಿಕ ಮತ್ತೊಬ್ಬ ವೈಭವ್ ಸೂರ್ಯವಂಶಿ ಹುಟ್ಟಿಕೊಳ್ತಾನೆ. ಹಾಗಂತ ಯಾರನ್ನು ಹೋಲಿಕೆ ಮಾಡಲು ಹೋಗಬಾರದು. ನಮ್ಮ ಹುಡುಗರು ಕೂಡ ಚೆನ್ನಾಗಿ ಆಡ್ತಾರೆ. ಆದ್ರೆ ವೈಭವ್ ಒಬ್ಬ ಯೂನಿಕ್ ಪ್ಲೇಯರ್ ನಾವು ಅದನ್ನು ಒಪ್ಪಿಕೊಳ್ಳಬೇಕು. ಆತ ಅದ್ಭುತವಾಗಿ ಆಡುತ್ತಿದ್ದಾನೆ. ಆತ ವಿಶೇಷ ಪ್ರತಿಭೆ. ಆತ ಮುಂದೆಯೂ ಇದೇ ರೀತಿಯ ಪ್ರದರ್ಶನವನ್ನು ಮುಂದುವರಿಸುತ್ತಾನೆ ಅಂತ ಭಾವಿಸಿದ್ದೇನೆ. ಆತ ಚೆನ್ನಾಗಿ ಆಡಿ ತಂಡವನ್ನು ಗೆಲ್ಲಿಸಲಿ" ಎಂದು ತಿಳಿಸಿದ್ದಾರೆ.