ಚೆನ್ನೈ, ಜೂ. 08 (DaijiworldNews/AA): ನಟ, ತಮಿಳುನಾಡು ಸಿಎಂ ದಳಪತಿ ವಿಜಯ್ ಅವರು ಭಾರತದ ಚೆಸ್ ಮಾಸ್ಟರ್ ಆರ್. ಪ್ರಜ್ಞಾನಂದ ಅವರನ್ನು ಸನ್ಮಾನಿಸಿ, ಅವರಿಗೆ 50 ಲಕ್ಷ ರೂಪಾಯಿ ಬಹುಮಾನ ಮೊತ್ತವನ್ನು ನೀಡಿದ್ದಾರೆ.

ನಾರ್ವೆ ಚೆಸ್ 2026 ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಬಳಿಕ ಸಿಎಂ ವಿಜಯ್ ಅವರನ್ನು ಭೇಟಿ ಮಾಡಿದ ವಿಚಾರವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡ ಅವರು, "ನನಗೆ ಚೆಸ್ ಬೋರ್ಡ್ ಜೊತೆ ಬರಲು ಹೇಳಲಾಗಿತ್ತು. ನಾನು ಸಿಎಂ ಜೊತೆ ಚೆಸ್ ಆಡಿದೆ. ಅವರು ನನ್ನ ಜೊತೆ ಚೆಸ್ ಆಡುತ್ತಾರೆ ಎಂದು ನಾನು ಭಾವಿಸಿರಲಿಲ್ಲ. 15 ನಿಮಿಷಗಳ ಕಾಲ ಚೆಸ್ ಆಡಿದೆವು. ಗೆದ್ದಿದ್ದು ನಾನೇ. ಅವರು ತುಂಬಾನೇ ಪ್ರೋತ್ಸಾಹದಾಯಕವಾಗಿದ್ದಾರೆ" ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ತಮಿಳುನಾಡು ಸಿಎಂ ಕಚೇರಿ, "ತಮಿಳುನಾಡು ಸಿಎಂ ವಿಜಯ್ ಅವರು 50 ಲಕ್ಷ ರೂಪಾಯಿ ಹಣವನ್ನು ಪ್ರಜ್ಞಾನಂದಗೆ ನೀಡಿದ್ದಾರೆ. ನಾರ್ವೆ ಚೆಸ್ 2026 ಅಲ್ಲಿ ಈ ಸಾಧನೆ ಮಾಡಿ ಇತಿಹಾಸ ಬರೆದಿರುವುದರಿಂದ ಈ ಗೌರವ ನೀಡಲಾಗಿದೆ" ಎಂದು ತಿಳಿಸಿದೆ.