ನ್ಯೂ ಚಂಡೀಗಡ, ಮೇ. 30 (DaijiworldNews/AK): ಐಪಿಎಲ್ ಕ್ವಾಲಿಫೈಯರ್-2 ಪಂದ್ಯದಲ್ಲಿ ಗೆದ್ದು ಗುಜರಾತ್ ಟೈಟಾನ್ಸ್ ಫೈನಲ್ ಪ್ರವೇಶಿಸಿದೆ. ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಐಪಿಎಲ್ ಟ್ರೋಫಿಗಾಗಿ ಸೆಣಸಲಿದೆ.

ನಾಯಕ ಶುಭಮನ್ ಗಿಲ್ ಸ್ಫೋಟಕ ಶತಕ ಸಿಡಿಸಿ ತಂಡವನ್ನು ಫೈನಲ್ಗೆ ಪ್ರವೇಶಿಸಿದ್ದಾರೆ. ಪಂದ್ಯ ಸೋಲಿನೊಂದಿಗೆ ರಾಜಸ್ಥಾನ್ ರಾಯಲ್ಸ್ ಮನೆಗೆ ಮರಳಿದೆ. ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 214 ರನ್ ಕಲೆಹಾಕಿತು. ಗುರಿ ಬೆನ್ನತ್ತಿದ ಗುಜರಾತ್ ಉತ್ತಮ ಬ್ಯಾಟಿಂಗ್ ಪ್ರದರ್ಶನದಿಂದ 7 ವಿಕೆಟ್ಗಳ ಗೆಲುವು ದಾಖಲಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಆರ್ಆರ್ಗೆ ಉತ್ತಮ ಆರಂಭ ಸಿಗಲಿಲ್ಲ. ಓಪನರ್ ಯಶಸ್ವಿ ಜೈಸ್ವಾಲ್ ಕೇವಲ 1 ರನ್ಗೆ ಔಟಾದರು. ನಂತರ ಬಂದ ಧ್ರುವ ಜುರೇಲ್ ಕೂಡ ಕೇವಲ 7 ರನ್ ಗಳಿಸಿ ಹೊರನಡೆದರು. ಅಚ್ಚರಿ ಎಂಬಂತೆ ಮೂರನೇ ಕ್ರಮಾಂಕದಲ್ಲಿ ಬಂದ ರವೀಂದ್ರ ಜಡೇಜಾ ಬ್ಯಾಟಿಂಗ್ ಕೈಚಳಕ ತೋರಿದರು. ವೈಭವ್ ಮತ್ತು ಜಡೇಜಾ ಜೋಡಿ ಆರ್ಆರ್ ಸವಾಲಿನ ಮೊತ್ತ ಪೇರಿಸಲು ರನ್ ಕೊಡುಗೆ ನೀಡಿತು.