ನವದೆಹಲಿ, ಮೇ. 25 (DaijiworldNews/AA): ಟಾಪ್ ಆರ್ಡರ್ನ ಮೂವರು ಬ್ಯಾಟ್ಸಮನ್ಗಳು ಫಾರ್ಮ್ನಲ್ಲಿದ್ದರೆ ಈ ಬಾರಿ ಎಸ್ಆರ್ಹೆಚ್ಗೆ ಚಾಂಪಿಯನ್ ಪಟ್ಟ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ತಿಳಿಸಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಲೀಗ್ ಹಂತದ ಕೊನೆಯ ಪಂದ್ಯದ ನಂತರ ಮಾತನಾಡಿದ ಅವರು, "ಟಾಪ್ ಆರ್ಡರ್ನಲ್ಲಿರುವ ಆಟಗಾರರು ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಈ ಟೂರ್ನಿಯ ಅತ್ಯಂತ ಬಲಿಷ್ಠ ತಂಡವನ್ನಾಗಿ ಮಾಡಿದೆ. ಪ್ಲೇಆಫ್ಸ್ನಲ್ಲಿ ಆ ಮೂವರು ಬ್ಯಾಟ್ಸಮನ್ಗಳು ಅಬ್ಬರಿಸಿದ್ರೆ ಎಸ್ಆರ್ಹೆಚ್ ಚಾಂಪಿಯನ್ಸ್ ಆಗೋದನ್ನ ಯಾರಿಂದಲೂ ತಡೆಯೋಕಾಗಲ್ಲ" ಎಂದು ಹೇಳಿದ್ದಾರೆ.
"ಹೈದರಾಬಾದ್ನ ಹೆನ್ರಿಕ್ ಕ್ಲಾಸೆನ್, ಇಶಾನ್ ಕಿಶನ್ ಮತ್ತು ಅಭಿಷೇಕ್ ಶರ್ಮಾ ಮೂವರು ಈ ಸೀಸನ್ನಲ್ಲಿ 500ಕ್ಕೂ ಹೆಚ್ಚು ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದು, ಮುಂದಿನ ಪಂದ್ಯಗಳಲ್ಲಿಯೂ ಉತ್ತರ ಪ್ರದರ್ಶನ ನೀಡುತ್ತಾರೆ ಎಂಬ ಭರವಸೆಯಿದೆ" ಎಂದಿದ್ದಾರೆ.