ಮುಂಬೈ, ಏ. 10 (DaijiworldNews/AK): ಇಂದು (ಏಪ್ರಿಲ್ 10) ಆರ್ಸಿಬಿ vs ಆರ್ಆರ್ ತಂಡಗಳು ಮುಖಾಮುಖಿ ಆಗುತ್ತಿವೆ. ಈ ಪೈಕಿ ಗೆಲವು ಯಾರ ಪಾಲಿಗೆ ಒಲಿಯಲಿದೆ ಎನ್ನುವ ಕುತೂಹಲ ಮೂಡಿದೆ.

ಐಪಿಎಲ್ನ ಈ ಸೀಸನ್ ಅಲ್ಲಿ ಆರ್ಸಿಬಿ ಮೊದಲ ಎರಡು ಪಂದ್ಯಗಳನ್ನು ಗೆದ್ದರೆ, ರಾಜಸ್ಥಾನ್ ರಾಯಲ್ಸ್ ತಂಡ ಆಡಿದ ಮೊದಲ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಎರಡೂ ತಂಡಗಳು ಸಮಬಲದಲ್ಲಿವೆ ಎಂದರೂ ತಪ್ಪಾಗಲಾರದು. ಇಂದು (ಏಪ್ರಿಲ್ 10) ಎರಡೂ ತಂಡಗಳು ಮುಖಾಮುಖಿ ಆಗುತ್ತಿವೆ. ಈ ಪೈಕಿ ಗೆಲವು ಯಾರ ಪಾಲಿಗೆ ಒಲಿಯಲಿದೆ ಎನ್ನುವ ಕುತೂಹಲ ಮೂಡಿದೆ. ಇಂದಿನ ಪಂದ್ಯ ಗುವಾಹಟಿಯಲ್ಲಿ ನಡೆಯಲಿದೆ.
ಆರ್ಸಿಬಿಯಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ಉತ್ತಮ ರೀತಿಯಲ್ಲಿ ಇದೆ. ಹೇಜಲ್ವುಡ್ ಅಲಭ್ಯತೆಯಲ್ಲಿ ಜೇಕಬ್ ಡಫ್ಫಿ ಅವರು ಉತ್ತಮ ಬೌಲಿಂಗ್ ಪ್ರದರ್ಶನ ಮಾಡುತ್ತಿದ್ದಾರೆ. ಈ ಮೂಲಕ ಹೇಜಲ್ವುಡ್ ಇಲ್ಲ ಎಂಬ ಕೊರಗನ್ನು ನೀಗಿಸುತ್ತಿದ್ದಾರೆ. ಈ ಮಧ್ಯೆ ಹೆಜಲ್ವುಡ್ ಕೂಡ ಫೀಲ್ಡ್ಗೆ ಇಳಿಯಲಿ ಎಂಬುದು ಅಭಿಮಾನಿಗಳ ಕೋರಿಕೆ ಆಗಿತ್ತು. ಅದು ಈಡೇರುತ್ತದೆಯೇ ಎಂಬುದು ಸದ್ಯದ ಪ್ರಶ್ನೆ.
ಹೇಜಲ್ವುಡ್ ಅವರು ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರು ಸಂಪೂರ್ಣ ಫಿಟ್ ಆಗುವ ಪ್ರಯತ್ನದಲ್ಲಿ ಇದ್ದಾರೆ.