ಬೆಂಗಳೂರು, ಏ. 06 (DaijiworldNews/AK): ಐಪಿಎಲ್ ಇತಿಹಾಸದಲ್ಲೇ 200 ವಿಕೆಟ್ ಕಬಳಿಸಿದ ಮೊದಲ ವೇಗದ ಬೌಲರ್ ಎಂಬ ದಾಖಲೆಯನ್ನು ಭುವನೇಶ್ವರ್ ಕುಮಾರ್ ನಿರ್ಮಿಸಿದ್ದಾರೆ.

ಚಿನ್ನಸ್ವಾಮಿ ಮೈದಾನದಲ್ಲಿ ಭಾನುವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆಯುಷ್ ವಿಕೆಟ್ ಕಬಳಿಸುವ ಮೂಲಕ ಭುವಿ ಈ ದಾಖಲೆಗೆ ಪಾತ್ರರಾದರು. ಟೂರ್ನಿ ಇತಿಹಾಸದಲ್ಲೇ 200 ವಿಕೆಟ್ ಮೈಲುಗಲ್ಲು ತಲುಪಿದ 2ನೇ ಬೌಲರ್ ಎಂಬ ದಾಖಲೆ ಭುವನೇಶ್ವರ್ ಪಾಲಾಗಿದೆ.
ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ 224 ವಿಕೆಟ್ಗಳನ್ನು ಕಬಳಿಸಿದ್ದಾರೆ. ಭುವನೇಶ್ವರ್ ಈಗ 200 ವಿಕೆಟ್ಗಳೊಂದಿಗೆ ಈ ಕ್ಲಬ್ಗೆ ಸೇರಿದ್ದಾರೆ. 2011ರಿಂದ ಐಪಿಎಲ್ನಲ್ಲಿ ಆಡುತ್ತಿರುವ ಭುವನೇಶ್ವರ್ ಒಟ್ಟು 3 ತಂಡ ಪ್ರತಿನಿಧಿಸಿದ್ದಾರೆ. 2011ರಿಂದ ಪುಣೆ ತಂಡದ ಪರ 3 ವರ್ಷ ಆಡಿದ್ದ ಭುವನೇಶ್ವರ್, 2014ರಿಂದ 2024ರವರೆಗೂ ಹೈದರಾಬಾದ್ ತಂಡದಲ್ಲಿದ್ದರು. 2025ರಲ್ಲಿ ಆರ್ಸಿಬಿ ತಂಡಕ್ಕೆ ಸೇರ್ಪಡೆಗೊಂಡಿದ್ದರು.