ವಡೋದರಾ, ಜ. 11 (DaijiworldNews/AA): ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ 4 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.

ವಡೋದರಾದ ಬಿಸಿಎ ಮೈದಾನದಲ್ಲಿ ನಡೆದ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವನ್ನು 4 ವಿಕೆಟ್ಗಳಿಂದ ಗೆದ್ದು ಆತಿಥೇಯ ಟೀಂ ಇಂಡಿಯಾ ಸರಣಿಯಲ್ಲಿ ಗೆಲುವಿನ ಶುಭಾರಂಭ ಮಾಡಿದೆ.
ಸುಮಾರು 15 ವರ್ಷಗಳ ನಂತರ ವಡೋದರಾದಲ್ಲಿ ಟೀಂ ಇಂಡಿಯಾ ಏಕದಿನ ಪಂದ್ಯವನ್ನಾಡಿದೆ. ಈ ಗೆಲುವಿನ ಮೂಲಕ ಟೀಂ ಇಂಡಿಯಾ 3 ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.
ವಿರಾಟ್ ಕೊಹ್ಲಿ 93 ರನ್ ಬಾರಿಸುವ ಮೂಲಕ ಶತಕ ವಂಚಿತರಾದರು. ಕೊಹ್ಲಿ ಅದ್ಭುತ ಪ್ರದರ್ಶನದೊಂದಿಗೆ 301 ರನ್ಗಳ ಗುರಿಯನ್ನು ಇನ್ನೊಂದು ಓವರ್ ಬಾಕಿ ಇರುವಂತೆಯೇ ಬೆನ್ನಟ್ಟಿ ಸರಣಿಯಲ್ಲಿ ಭಾರತ ತಂಡ 1-0 ಮುನ್ನಡೆ ಸಾಧಿಸಿತು.