ಮುಂಬೈ, ನ. 10 (DaijiworldNews/AK):ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಟೂರ್ನಿಯ 19ನೇ ಆವೃತ್ತಿಗೆ ಈಗಿನಿಂದಲೇ ಸಿದ್ದತೆ ಶುರುವಾಗಿದೆ. ಡಿಸೆಂಬರ್ 15ರಂದು ಭಾರತದಲ್ಲೇ ಮಿನಿ ಹರಾಜು ನಡೆಯುವ ಸಾಧ್ಯತೆಗಳಿವೆ. ದುಬೈನ ಜೆಡ್ಡಾದಲ್ಲಿ ನಡೆದ ಕೊನೆಯ ಎರಡು ಹರಾಜಿಗಿಂತಲೂ ಭಿನ್ನವಾಗಿ 2026ರ ಹರಾಜು ಪ್ರಕ್ರಿಯೆಯನ್ನ ಭಾರತದಲ್ಲೇ ನಡೆಸಲು ತಯಾರಿ ನಡೆಸಲಾಗುತ್ತಿದೆ. ಅದರೆ ಈವರೆಗೆ ಯಾವುದೇ ಅಧಿಕೃತ ನಿರ್ಧಾರ ತೆಗೆದುಕೊಂಡಿಲ್ಲ.

ನವೆಂಬರ್ 15ರ ಒಳಗೆ ಎಲ್ಲಾ ಫ್ರಾಂಚೈಸಿಗಳು ರಿಟೇನ್ ಆಟಗಾರರ ಪಟ್ಟಿ ಬಿಡುಗಡೆ ಮಾಡುವಂತೆ ಐಪಿಎಲ್ ಮಂಡಳಿ ಸೂಚನೆ ನೀಡಿದೆ.
ಇದಕ್ಕೂ ಮುನ್ನ 4ನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ (WPL 2026) ಟೂರ್ನಿಗೆ ಇದೇ ನವೆಂಬರ್ 27ರಂದು ದೆಹಲಿಯಲ್ಲಿ ಮೆಗಾ ಹರಾಜು ನಡೆಯಲಿದೆ. ಅದಕ್ಕಾಗಿ ಈಗಾಗಲೇ ಎಲ್ಲಾ 5 ಫ್ರಾಂಚೈಸಿಗಳು ನ.6ರಂದೇ ರಿಟೇನ್ ಆಟಗಾರರ ಪಟ್ಟಿಯನ್ನ ಪ್ರಕಟಿಸಿವೆ.