ಮುಂಬೈ, ಅ. 13 (DaijiworldNews/AA): ಇದೇ ಅಕ್ಟೋಬರ್ 15 ರಿಂದ ಪ್ರಾರಂಭವಾಗಲಿರುವ ದೇಶಿ ಟೂರ್ನಿ ರಣಜಿ ಟ್ರೋಫಿಯಲ್ಲಿ 14 ವರ್ಷದ ವೈಭವ್ ಸೂರ್ಯವಂಶಿ ಬಿಹಾರ ತಂಡದ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ.

ವೈಭವ್ ಸೂರ್ಯವಂಶಿ ಇದುವರೆಗೆ ಬಿಹಾರ ಪರ ಐದು ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಅವರು 10 ಇನ್ನಿಂಗ್ಸ್ಗಳನ್ನಾಡಿ 158 ಎಸೆತಗಳನ್ನು ಎದುರಿಸಿ 100 ರನ್ ಕಲೆಹಾಕಿದ್ದಾರೆ. ಈ ಅವಧಿಯಲ್ಲಿ, ಅವರು 18 ಬೌಂಡರಿಗಳು ಮತ್ತು ಒಂದು ಸಿಕ್ಸರ್ ಬಾರಿಸಿದ್ದಾರೆ. ವೈಭವ್ ಸೂರ್ಯವಂಶಿಗೆ ಮೊದಲ ಬಾರಿಗೆ ಬಿಹಾರದ ರಣಜಿ ತಂಡದ ಉಪನಾಯಕನ ಜವಾಬ್ದಾರಿ ಸಿಕ್ಕಿದೆ.
ಇದೀಗ ಬಿಹಾರ ತಂಡದ ಉಪನಾಯಕನಾಗಿ ಆಯ್ಕೆಯಾಗಿರುವ ವೈಭವ್ ಸೂರ್ಯವಂಶಿ ಬಿಹಾರ ಪರ ತಮ್ಮ ಆರನೇ ಪ್ರಥಮ ದರ್ಜೆ ಪಂದ್ಯವನ್ನು ಆಡಲಿದ್ದಾರೆ. ಇನ್ನು ಈ ತಂಡಕ್ಕೆ ಸಕಿಬುಲ್ ಗನಿ ಅವರನ್ನು ನಾಯಕರಾಗಿ ಆಯ್ಕೆಯಾಗಿರುತ್ತಾರೆ.