ಮುಂಬೈ, ಅ. 08 (DaijiworldNews/AA): ಚಾಹಲ್ ತನಗೆ ಮದುವೆಯಾದ ಎರಡೇ ತಿಂಗಳಿಗೆ ಮೋಸ ಮಾಡಿದ್ದರು ಎಂದು ರಿಯಾಲಿಟಿ ಶೋವೊಂದರಲ್ಲಿ ಧನಶ್ರೀ ವರ್ಮಾ ಹೇಳಿದ್ದರು. ಧನಶ್ರೀ ಅವರ ಈ ಆರೋಪಕ್ಕೆ ಯುಜ್ವೇಂದ್ರ ಚಾಹಲ್ ತಕ್ಕ ಉತ್ತರ ನೀಡಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಚಾಹಲ್, "ನಾನು ಒಬ್ಬ ಆಟಗಾರ ಮತ್ತು ನಾನು ಮೋಸ ಮಾಡುವುದಿಲ್ಲ. ಯಾರಾದರೂ ಎರಡು ತಿಂಗಳೊಳಗೆ ಮೋಸ ಮಾಡಿದರೆ, ಸಂಬಂಧ ಎಷ್ಟು ಕಾಲ ಉಳಿಯುತ್ತದೆ? ನನಗೆ, ಈ ಅಧ್ಯಾಯ ಮುಗಿದಿದೆ. ನಾನು ನನ್ನ ಜೀವನವನ್ನು ಮುಂದುವರಿಸಿದ್ದೇನೆ ಮತ್ತು ಉಳಿದವರೆಲ್ಲರೂ ಸಹ ಮುಂದುವರಿಯಬೇಕು" ಎಂದು ಧನಶ್ರೀ ವರ್ಮಾ ಮಾಡಿದ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ.
"ನಮ್ಮ ವೈವಾಹಿಕ ಜೀವನ 4.5 ವರ್ಷಗಳ ಕಾಲ ನಡೆದಿತ್ತು. ಹೀಗಿರುವಾಗ ಮದುವೆಯಾದ ಎರಡು ತಿಂಗಳಲ್ಲಿ ಮೋಸ ಹೋದರೆ ಅಷ್ಟು ವರ್ಷ ಯಾರು ಜೊತೆಯಲಿರುತ್ತಾರೆ?. ನಾನು ಹಿಂದಿನದ್ದು ಮರೆತು ದೂರ ಸರಿದಿದ್ದೇನೆ ಎಂದು ನಾನು ಮೊದಲೇ ಹೇಳಿದ್ದೆ. ಆದರೆ ಕೆಲವರು ಇನ್ನೂ ಅಲ್ಲಿಯೇ ಸಿಲುಕಿಕೊಂಡಿದ್ದಾರೆ. ಅವರ ಮನೆ ನನ್ನ ಹೆಸರಿನಲ್ಲಿ ನಡೆಯುತ್ತಿದೆ, ಆದ್ದರಿಂದ ಅವರು ಹಾಗೆಯೇ ಮುಂದುವರಿಸಬಹುದು" ಎಂದು ಧನಶ್ರೀಗೆ ಟಾಂಗ್ ನೀಡಿದ್ದಾರೆ.
"ನನಗೆ ಅದರ ಬಗ್ಗೆ ಚಿಂತೆ ಇಲ್ಲ, ಅದು ಪ್ರಸ್ತುತವೂ ಅಲ್ಲ. ನಾನು ಈ ಅಧ್ಯಾಯವನ್ನು ಮರೆತಿದ್ದೇನೆ. ಯಾರಾದರೂ ಏನು ಬೇಕಾದರೂ ಹೇಳಬಹುದು. ಅದು ಸೋಶಿಯಲ್ ಮೀಡಿಯಾದಲ್ಲಿ ಬೇಗ ವೈರಲ್ ಆಗುತ್ತದೆ. ಇದರ ಜೊತೆಗೆ ನೂರು ವದಂತಿಗಳು ಹರಡುತ್ತವೆ. ಆದರೆ ನನಗೆ, ಆ ಅಧ್ಯಾಯ ಮುಗಿದಿದೆ. ನಾನು ಅದರ ಬಗ್ಗೆ ಮತ್ತೆ ಮಾತನಾಡಲು ಬಯಸುವುದಿಲ್ಲ" ಎಂದು ತಿಳಿಸಿದ್ದಾರೆ.