ಬೆಂಗಳೂರು, ಸೆ. 19(DaijiworldNews/TA): 2025 ರ ಏಷ್ಯಾ ಕಪ್ನ ಸೂಪರ್ 4 ಹಂತಕ್ಕೆ ನಾಲ್ಕು ತಂಡಗಳನ್ನು ಅಂತಿಮಗೊಳಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನ ಈಗಾಗಲೇ ಗ್ರೂಪ್ ಎ ನಿಂದ ಅರ್ಹತೆ ಪಡೆದಿದೆ. ಶ್ರೀಲಂಕಾ ಮತ್ತು ಬಾಂಗ್ಲಾದೇಶ ಗ್ರೂಪ್ ಬಿ ನಿಂದ ಸೂಪರ್ 4 ಗೆ ಲಗ್ಗೆ ಇಟ್ಟಿದೆ.

ಏಷ್ಯಾ ಕಪ್ನ 11 ನೇ ಪಂದ್ಯವು ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ನಡುವೆ ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯವನ್ನು ಶ್ರೀಲಂಕಾ 6 ವಿಕೆಟ್ ಗಳಿಂದ ಗೆದ್ದಿತು, ಇದರಿಂದಾಗಿ ಶ್ರೀಲಂಕಾ ಮತ್ತು ಬಾಂಗ್ಲಾದೇಶ ಎರಡೂ ಸೂಪರ್ 4 ಗೆ ಅರ್ಹತೆ ಪಡೆದವು.
ಏಷ್ಯಾಕಪ್ 2025 ಸೂಪರ್ -4 ಹಂತದ ವೇಳಾಪಟ್ಟಿ:
ಸೆ. 20, ಶ್ರೀಲಂಕಾ vs ಬಾಂಗ್ಲಾದೇಶ, ದುಬೈ, ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂ, ರಾತ್ರಿ 8 ಗಂಟೆಗೆ.
ಸೆ. 21, ಭಾರತ vs ಪಾಕಿಸ್ತಾನ, ದುಬೈ, ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣ, ರಾತ್ರಿ 8 ಗಂಟೆಗೆ.
ಸೆ. 23, ಪಾಕಿಸ್ತಾನ vs ಶ್ರೀಲಂಕಾ, ಅಬುಧಾಬಿ, ಶೇಖ್ ಜಾಯೆದ್ ಕ್ರೀಡಾಂಗಣ, ರಾತ್ರಿ 8 ಗಂಟೆಗೆ.
ಸೆ. 24, ಭಾರತ vs ಬಾಂಗ್ಲಾದೇಶ, ದುಬೈ, ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣ, ರಾತ್ರಿ 8 ಗಂಟೆಗೆ.
ಸೆ. 25, ಪಾಕಿಸ್ತಾನ vs ಬಾಂಗ್ಲಾದೇಶ, ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣ, ರಾತ್ರಿ 8 ಗಂಟೆಗೆ.
ಸೆ. 27, ಭಾರತ vs ಶ್ರೀಲಂಕಾ, ದುಬೈ, ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣ, ರಾತ್ರಿ 8 ಗಂಟೆಗೆ.
ಸೆ. 28, ಏಷ್ಯಾ ಕಪ್ 2025 ಫೈನಲ್, ದುಬೈ, ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣ ಪಂದ್ಯ ನಡೆಯಲಿದೆ,