ಮುಂಬೈ,ಸೆ. 18 (DaijiworldNews/AK): ಏಷ್ಯಾಕಪ್ 2025 ರ 10ನೇ ಪಂದ್ಯದಲ್ಲಿ ಯುಎಇ ತಂಡವನ್ನು ಮಣಿಸಿದ ಪಾಕಿಸ್ತಾನ ಸೂಪರ್ 4 ಸುತ್ತಿಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದೆ.

ಈ ಮೂಲಕ ಎ ಗುಂಪಿನಲ್ಲಿ ಭಾರತದೊಂದಿಗೆ ಪಾಕಿಸ್ತಾನ ತಂಡ ಸೂಪರ್ 4 ಸುತ್ತನ್ನು ಆಡಲಿದೆ. ಇನ್ನು ಯುಎಇ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ನಿಗದಿತ 20 ಓವರ್ಗಳಲ್ಲಿ 146 ರನ್ ಕಲೆಹಾಕಿತು.
ಈ ಗುರಿ ಬೆನ್ನಟ್ಟಿದ ಯುಎಇ ತಂಡ ತನ್ನ ಅನುಭವದ ಕೊರತೆಯಿಂದಾಗಿ 105 ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ ಪಾಕ್ ತಂಡ ಈ ಪಂದ್ಯವನ್ನು 41 ರನ್ಗಳಿಂದ ಗೆದ್ದುಕೊಳ್ಳುವುದರೊಂದಿಗೆ ಸೂಪರ್ 4 ಸುತ್ತನ್ನು ಪ್ರವೇಶಿಸಿದೆ.
ಉಳಿದಂತೆ ಎ ಗುಂಪಿನಲ್ಲಿದ್ದ ಯುಎಇ ಹಾಗೂ ಒಮಾನ್ ತಂಡಗಳು ಲೀಗ್ ಹಂತದಲ್ಲೇ ತಮ್ಮ ಪ್ರಯಾಣ ಮುಗಿಸಿವೆ.