ಮಂಗಳೂರು, ಸೆ. 13 (DaijiworldNews/AA): ಮಂಗಳೂರಿನ ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ 8ನೇ ತರಗತಿಯ ವಿದ್ಯಾರ್ಥಿ ಯುವರಾಜ ಕುಂದರ್ ಅವರು ಸಿಬಿಎಸ್ಇ ರಾಷ್ಟ್ರ ಮಟ್ಟದ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ 400 ಮೀಟರ್ ಓಟದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.



ಈ ಪಂದ್ಯಾವಳಿಯು ವಾರಾಣಸಿಯ ಸಂತ ಅತುಲನಂದ್ ಕಾನ್ವೆಂಟ್ ಶಾಲೆಯಲ್ಲಿ ಸೆಪ್ಟೆಂಬರ್ 10ರಿಂದ 13ರವರೆಗೆ ನಡೆಯಿತು.
ಈಗಾಗಲೇ 200 ಮೀ. ಓಟದಲ್ಲಿ ಚಿನ್ನದ ಪದಕ ಗೆದ್ದಿರುವ ಯುವರಾಜ ಕುಂದರ್ ಅವರ ಅಪೂರ್ವ ಸಾಧನೆಗೆ ಸಂಸ್ಥೆಯ ಪ್ರಾಂಶುಪಾಲರಾದ ರೆ.ಫಾ. ರೋಹನ್ ಡಿ ಅಲ್ಮೇಡ ಅವರು ಯುವರಾಜ ಕುಂದರ್ ಹಾಗೂ ಅವರ ಪೋಷಕರಾದ ಧೀರಜ್ ಕೋಟ್ಯಾನ್ ಮತ್ತು ವೀನಾ ಡಿ. ಕೋಟ್ಯಾನ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.