ನವದೆಹಲಿ, ಸೆ. 10 (DaijiworldNews/TA): ಭಾರತದ ಮಾಜಿ ಬ್ಯಾಟ್ಸ್ಮನ್ ಸಂಜಯ್ ಬಂಗಾರ್ ಅವರ ಪುತ್ರಿ ಅನಯಾ ಬಂಗಾರ್ ಮತ್ತೊಮ್ಮೆ ಆಘಾತಕಾರಿ ಸಂಗತಿಯೊಂದನ್ನು ಬಹಿರಂಗಪಡಿಸುವ ಮೂಲಕ ಸುದ್ದಿಯಲ್ಲಿದ್ದಾರೆ. ಈ ಹಿಂದೆ ಆರ್ಯನ್ ಎಂದು ಕರೆಯಲ್ಪಡುತ್ತಿದ್ದ ಅನಯಾ ಕಳೆದ ವರ್ಷ ಲಿಂಗ ಪರಿವರ್ತನೆಗೊಂಡು ಭಾರತೀಯ ಕ್ರಿಕೆಟ್ನಲ್ಲಿ ತಾನು ಎದುರಿಸಿದ ಪ್ರತಿಕೂಲತೆಯ ಬಗ್ಗೆ ಆಗಾಗ್ಗೆ ಮಾತನಾಡಿದ್ದಾರೆ. ಪ್ರಸ್ತುತ ರಿಯಾಲಿಟಿ ಶೋ ರೈಸ್ ಅಂಡ್ ಫಾಲ್ನಲ್ಲಿ ಕಾಣಿಸಿಕೊಂಡಿರುವ ಅವರು, ಪ್ರಸಿದ್ಧ ಕ್ರಿಕೆಟಿಗನೊಬ್ಬ ತನಗೆ ಅಶ್ಲೀಲ ಫೋಟೋ ಕೇಳಿದ್ದ ವಿಚಾರ ಹಂಚಿಕೊಂಡಿದ್ದಾರೆ.

ಅನಾಯಾ ಹುಟ್ಟುವಾಗ ಹುಡುಗನಾಗಿದ್ದರು. ಆದರೆ ಹಾರ್ಮೋನ್ಗಳ ಬದಲಾವಣೆ ಪರಿಣಾಮವಾಗಿ ಲಿಂಗ ಬದಲಾವಣೆಗೊಂಡರು. ಅವರು ಈಗ ರಿಯಾಲಿಟಿ ಶೋ ಮೂಲಕ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಈ ವೇಳೆ ಅವರು ಒಂದು ವಿಚಾರ ರಿವೀಲ್ ಮಾಡಿದ್ದಾರೆ. ಅನಾಯಾ ಲಿಂಗಪರಿವರ್ತನೆ ನಂತರ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದರು. ಅವರು ನಿರಂತರ ಪೋಸ್ಟ್ ಮಾಡುತ್ತಿದ್ದರು ಈ ವೇಳೆ ಓರ್ವ ಕ್ರಿಕೆಟಿಗ ಅವರ ಬಳಿ ಅಶ್ಲೀಲ್ ಫೋಟೋ ಕೇಳಿದ್ದ ಎಂಬುವುದಾಗಿ ಪ್ರಸ್ತುತ ರಿಯಾಲಿಟಿ ಶೋ ನಲ್ಲಿ ರಿವೀಲ್ ಮಾಡಿದ್ದಾರೆ. ಈ ವಿಚಾರ ಇದೀಗ ಎಲ್ಲೆಡೆ ಸದ್ದು ಮಾಡುತ್ತಿದೆ.
ಅವನು ನೇರವಾಗಿ ಆ ರೀತಿಯ ಫೋಟೋ’ ಎಂದು ಅನಾಯಾ ಹೇಳಿದ್ದಾರೆ. ‘ಯಾವ ರೀತಿಯ ಫೋಟೋ? ನಗ್ನ ಫೋಟೋನಾ’ ಎಂದು ಸಹ ಸ್ಪರ್ಧಿ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಅನಾಯಾ ‘ಅರ್ಥ ಮಾಡಿಕೊಳ್ಳಿ’ ಎಂದು ಹೇಳಿದ್ದಾರೆ. ಮತ್ತೊಬ್ಬರು, ‘ಆ ಕ್ರಿಕೆಟರ್ ಎಲ್ಲರಿಗೂ ಗೊತ್ತಾ’ ಎಂದು ಕೇಳಿದಾಗ, ‘ಅವರು ಎಲ್ಲರಿಗೂ ಗೊತ್ತು’ ಎಂದು ಅನಾಯಾ ಹೇಳಿದ್ದಾರೆ. ಇದನ್ನು ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. ಅನಾಯಾ ಅವರಿಗೆ ಬೆತ್ತಲೆ ಫೋಟೋ ಕಳುಹಿಸಿದ ಆ ಕ್ರಿಕೆಟರ್ ಯಾರು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಾ ಇದೆ.
ಅನಾಯಾ ಇಂಗ್ಲೆಂಡ್ ಮಹಿಳಾ ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದರು. ಆದರೆ, ಟ್ರಾನ್ಸ್ಜೆಂಡರ್ಗಳಿಗೆ ಯಾವುದೇ ಅವಕಾಶ ನೀಡುವುದಿಲ್ಲ ಎಂದು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಸ್ಪಷ್ಟನೆ ನೀಡಿತ್ತು. ಈಗ ಅವರು ರಿಯಾಲಿಟಿ ಶೋಗೆ ಬಂದು ಪ್ರಸಿದ್ದಿ ಪಡೆಯುತ್ತಿದ್ದಾರೆ.