ಹರಾರೆ, ಸೆ. 07(DaijiworldNews/TA): ಝಿಂಬಾಬ್ವೆ ತಂಡವು ಶ್ರೀಲಂಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಇತಿಹಾಸ ನಿರ್ಮಿಸಿ, ಕ್ರೀಡಾಭಿಮಾನಿಗಳ ಗಮನ ಸೆಳೆದಿದೆ. ಹರಾರೆಯ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆದ ಈ ರೋಮಾಂಚಕ ಪಂದ್ಯದಲ್ಲಿ ಆತಿಥೇಯರು ತಮ್ಮ ಶ್ರೇಷ್ಠ ಆಟದೊಂದಿಗೆ ಶ್ರೀಲಂಕಾ ತಂಡವನ್ನು ಕೇವಲ 80 ರನ್ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾದರು.

ಶ್ರೀಲಂಕಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದರೂ ಝಿಂಬಾಬ್ವೆ ಬೌಲರ್ಗಳ ದಾಳಿಗೆ ತತ್ತರಿಸಿ 17.4 ಓವರ್ಗಳಲ್ಲೇ ಸಂಪೂರ್ಣವಾಗಿ ಪೆವಿಲಿಯನ್ ಸೇರುವಂತಾಯಿತು. ಇದಕ್ಕೂ ಮುನ್ನ, 2021ರ ಹರಾರೆಯಲ್ಲೇ ಪಾಕಿಸ್ತಾನ್ 99 ರನ್ಗಳಿಗೆ ಆಲೌಟ್ ಆಗಿದ್ದ ಘಟನೆ ಈ ದಿಸೆಯಲ್ಲಿ ಸ್ಮರಣೀಯ.
ಝಿಂಬಾಬ್ವೆ ತಂಡವು ಈ ಸವಾಲಿನ 81 ರನ್ಗಳ ಗುರಿಯನ್ನು ಸಂಪೂರ್ಣ ಬೆನ್ನತ್ತಿ, ಕೇವಲ 14.2 ಓವರ್ಗಳಲ್ಲಿ 5 ವಿಕೆಟ್ಗಳ ಭರ್ಜರಿ ಜಯವನ್ನು ಸಾಧಿಸಿತು. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-1 ಸಮಬಲ ಸಾಧಿಸಿರುವ ಝಿಂಬಾಬ್ವೆ, ಅಂತಿಮ ಪಂದ್ಯಕ್ಕೆ ಭರ್ಜರಿ ತಯಾರಿ ಮಾಡಿಕೊಂಡಿದೆ.