ಇಸ್ಲಾಮಾಬಾದ್, ಆ. 07 (DaijiworldNews/AA): ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದಿರುವುದು ವ್ಯಾಸಲೀನ್ ಬಳಸಿ ಎಂದು ಪಾಕಿಸ್ತಾನ್ ತಂಡದ ಮಾಜಿ ಆಟಗಾರ ಶಬ್ಬಿರ್ ಅಹ್ಮದ್ ಗಂಭೀರ ಆರೋಪ ಮಾಡಿದ್ದಾರೆ.

ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಭಾರತದ ವೇಗಿಗಳು ಯಶಸ್ಸು ಸಾಧಿಸಲು ಚೆಂಡಿನ ಮೇಲೆ ವ್ಯಾಸಲೀನ್ ಬಳಸಿದ್ದಾರೆ. ಹೀಗಾಗಿಯೇ 80+ ಓವರ್ಗಳ ನಂತರವೂ ಚೆಂಡು ಹೊಸದರಂತೆ ಹೊಳೆಯುತ್ತಿತ್ತು. ಅಂಪೈರ್ ಈ ಚೆಂಡನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಬೇಕು. ವ್ಯಾಸಲೀನ್ ಬಳಸಿ ಟೀಮ್ ಇಂಡಿಯಾ ತನ್ನ ಅನುಕೂಲಕ್ಕೆ ತಕ್ಕಂತೆ ಚೆಂಡನ್ನು ಬಳಸಿಕೊಂಡಿತ್ತು. ಇದರಿಂದಾಗಿ ಇಂಗ್ಲೆಂಡ್ ತಂಡವು 6 ರನ್ಗಳಿಂದ ಸೋಲಬೇಕಾಯಿತು ಎಂದು ತಿಳಿಸಿದ್ದಾರೆ.
ಟೀಮ್ ಇಂಡಿಯಾ ವೇಗಿಗಳು ವ್ಯಾಸಲೀನ್ ಬಳಸುವ ಮೂಲಕ ಚೆಂಡಿನ ಒಂದು ಬದಿಯನ್ನು ಶೈನಿಂಗ್ನಲ್ಲಿರಿಸಿದ್ದಾರೆ. ಇದರಿಂದ ಚೆಂಡು ಸ್ವಿಂಗ್ ಆಗಲು ನೆರವಾಗುತ್ತದೆ. ಅದರಂತೆ ಭಾರತೀಯ ವೇಗಿಗಳು ಅಂತಿಮ ದಿನದಾಟದಲ್ಲಿ ಯಶಸ್ಸು ಸಾಧಿಸಿದ್ದಾರೆ. ನನ್ನ ಪ್ರಕಾರ, ಓವಲ್ ಟೆಸ್ಟ್ ಪಂದ್ಯದಲ್ಲಿ ಬಳಸಲಾದ ಚೆಂಡನ್ನು ಲ್ಯಾಬ್ನಲ್ಲಿ ಟೆಸ್ಟ್ ಮಾಡಬೇಕು. ಈ ಮೂಲಕ ಭಾರತೀಯ ಬೌಲರ್ಗಳು ವ್ಯಾಸಲೀನ್ ಬಳಸಿರುವುದನ್ನು ಪತ್ತೆ ಹಚ್ಚಬೇಕು ಎಂದಿದ್ದಾರೆ.