ಮ್ಯಾಂಚೆಸ್ಟರ್, ಜು. 26 (DaijiworldNews/AA): ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತದ ವಿರುದ್ಧ ಅತ್ಯಧಿಕ ಸೆಂಚುರಿ ಸಿಡಿಸುವ ಮೂಲಕ ಜೋಸೆಫ್ ಎಡ್ವರ್ಡ್ ರೂಟ್(ಜೋ ರೂಟ್) ಹೊಸ ದಾಖಲೆ ನಿರ್ಮಿಸಿದ್ದಾರೆ.

ಮ್ಯಾಂಚೆಸ್ಟರ್ನಲ್ಲಿ ಟೀಮ್ ಇಂಡಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ 150 ರನ್ಗಳ ಮ್ಯಾರಥಾನ್ ಇನಿಂಗ್ಸ್ ಆಡುವ ಮೂಲಕ ರೂಟ್ ಹೊಸ ಇತಿಹಾಸ ಬರೆದಿದ್ದಾರೆ. ಈ ಮೊದಲು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಟೀಮ್ ಇಂಡಿಯಾ ವಿರುದ್ಧ ಅತ್ಯಧಿಕ ಸೆಂಚುರಿ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಸ್ಟೀವ್ ಸ್ಮಿತ್ ಪಾತ್ರರಾಗಿದ್ದರು. ಆದರೀಗ ಈ ದಾಖಲೆಯನ್ನು ಮುರಿದು ಜೋ ರೂಟ್ ಅಗ್ರಸ್ಥಾನಕ್ಕೇರಿದ್ದಾರೆ
ಟೀಮ್ ಇಂಡಿಯಾ ವಿರುದ್ಧ 46 ಟೆಸ್ಟ್ ಇನಿಂಗ್ಸ್ ಆಡಿರುವ ಸ್ಮಿತ್ ಒಟ್ಟು 11 ಶತಕ ಬಾರಿಸಿ ಅಗ್ರಸ್ಥಾನದಲ್ಲಿದ್ದರು. ಇದೀಗ ಭಾರತದ ವಿರುದ್ಧ 62 ಇನಿಂಗ್ಸ್ ಆಡಿರುವ ಜೋ ರೂಟ್ ಬರೋಬ್ಬರಿ 12 ಶತಕ ಸಿಡಿಸಿ ಅಗ್ರಸ್ಥಾನಕ್ಕೇರಿದ್ದಾರೆ.
ಜೊತೆಗೆ ಭಾರತ-ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎಂಬ ದಾಖಲೆ ಕೂಡ ಜೋ ರೂಟ್ ಹೆಸರಿನಲ್ಲಿತ್ತು. ಟೀಮ್ ಇಂಡಿಯಾ ವಿರುದ್ಧ 62 ಇನಿಂಗ್ಸ್ ಆಡಿರುವ ಅವರು ಈವರೆಗೆ ಬರೋಬ್ಬರಿ 3249 ರನ್ಗಳನ್ನು ಕಲೆಹಾಕಿದ್ದಾರೆ. ಜೋ ರೂಟ್ ಅವರನ್ನು ಹೊರತುಪಡಿಸಿ ಭಾರತದ ಅಥವಾ ಇಂಗ್ಲೆಂಡ್ನ ಇನ್ಯಾವುದೇ ಬ್ಯಾಟರ್ 3000 ರನ್ಗಳ ಗಡಿದಾಟಿಲ್ಲ ಎಂಬುದು ವಿಶೇಷ.
ಸದ್ಯ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ಗಳ ಪಟ್ಟಿಯಲ್ಲಿ ಜೋ ರೂಟ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಜೋ ರೋಟ್ ಅಗ್ರಸ್ಥಾನಕ್ಕೇರಲು ಇನ್ನು ಕೇವಲ 2513 ರನ್ಗಳ ಅಗತ್ಯವಿದೆ. 15921 ರನ್ಗಳೊಂದಿಗೆ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನ್ಕದಲ್ಲಿದ್ದು, ಜೋ ರೂಟ್ ಈ ವಿಶ್ವ ದಾಖಲೆಯನ್ನು ಮುರಿಯಲಿದ್ದಾರಾ ಎಂದು ಕಾದು ನೋಡಬೇಕಿದೆ.