ಮುಂಬೈ, ಜು. 16(DaijiworldNews/AK): ಕನ್ನಡಿಗ ದೇವದತ್ ಪಡಿಕ್ಕಲ್ ಅವರು ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ಪರ ಆಡಿ ಒಳ್ಳೆಯ ಪ್ರದರ್ಶನ ನೀಡಿದರು. ಗಾಯ ಆದ ಕಾರಣ ಅವರು ಸೀಸನ್ನಿಂದ ದೂರವೇ ಇರಬೇಕಾಗಿ ಬಂತು.

ಈಗ ಅವರು ‘ಮಹಾರಾಜ ಟ್ರೋಫಿ ಟಿ20’ ಆಡಲು ಸಜ್ಜಾಗಿದ್ದಾರೆ. ಈ ಬಾರಿ ಹರಾಜಿನಲ್ಲಿ ದೇವದತ್ಗೆ ಜಾಕ್ಪಾಟ್ ಹೊಡೆದಿದೆ. ಕಳೆದ ವರ್ಷ ರಾಜಸ್ಥಾನ್ ರಾಯಲ್ಸ್ ಪರ ದೇವದತ್ ಆಡಿದ್ದರು.
ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಯಲ್ಲಿ ಮಹರಾಜ ಟ್ರೋಫಿಗೆ ಜುಲೈ 15ರಂದು ಹರಾಜು ಪ್ರಕ್ರಿಯೆ ನಡೆದಿದೆ. ದೇವದತ್ ಅವರು ಅತಿ ಹೆಚ್ಚು ಬೆಲೆಗೆ ಮಾರಾಟ ಆದ ಆಟಗಾರ ಎನಿಸಿಕೊಂಡಿದ್ದಾರೆ.
ಆರ್ಸಿಬಿ ದೇವದತ್ ಅವರನ್ನು 3.20 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ಈಗ ‘ಹುಬ್ಬಳ್ಳಿ ಟೈಗರ್ಸ್’ 13.20 ಲಕ್ಷ ರೂಪಾಯಿಗೆ ಪಡಿಕ್ಕಲ್ನ ಖರೀದಿಸಿದೆ. ಇಡೀ ಮಹರಾಜ ಟ್ರೋಫಿ ಇತಿಹಾಸದಲ್ಲೇ ಅತಿ ಹೆಚ್ಚು ಬೆಲೆಗೆ ಮಾರಾಟ ಆದ ಆಟಗಾರ ಎನಿಸಿಕೊಂಡಿದ್ದಾರೆ.
ಕನ್ನಡಿಗ ಮನೀಶ್ ಪಾಂಡೆಯನ್ನು ‘ಮೈಸೂರು ವಾರಿಯರ್ಸ್’ ತಂಡ 12.20 ಲಕ್ಷ ರೂಪಾಯಿಗೆ ಖರೀದಿಸಿದೆ. ಸನ್ ರೈಸರ್ಸ್ ಹೈದರಾಬಾದ್ನ ಅಭಿನವ್ ಮನೋಹರ್ನ ಹುಬ್ಬಳ್ಳಿ ಟೈಗರ್ಸ್ 12.20 ಲಕ್ಷ ರೂಪಾಯಿ ಕೊಟ್ಟು ಪಡೆದುಕೊಂಡಿದೆ. ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ನ ‘ಮಂಗಳೂರು ಡ್ರ್ಯಾಗನ್ಸ್’ 8.60 ಲಕ್ಷ ರೂಪಾಯಿಗೆ ಪಡೆದುಕೊಂಡಿದೆ.