ಮುಂಬೈ, ಜು. 11 (DaijiworldNews/AK): ಲಾರ್ಡ್ಸ್ ಟೆಸ್ಟ್ ಪಂದ್ಯದ ಮೊದಲ ದಿನದಂದು ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಇಂಜುರಿಗೆ ಒಳಗಾಗಿದ್ದಾರೆ.

ಜಸ್ಪ್ರೀತ್ ಬುಮ್ರಾ ಅವರ ಚೆಂಡನ್ನು ಲೆಗ್ ಸೈಡ್ನಲ್ಲಿ ಹಿಡಿಯಲು ಪ್ರಯತ್ನಿಸುವಾಗ ಅವರ ಬೆರಳಿಗೆ ಗಂಭೀರ ಗಾಯವಾಯಿತು. ಆ ಬಳಿಕ ಪಂತ್ ಕೀಪಿಂಗ್ ಮಾಡಲು ಸಾಕಷ್ಟು ತೊಂದರೆ ಅನುಭವಿಸಿದರು.
ಇದರಿಂದ 34 ನೇ ಓವರ್ ನಂತರ ಮೈದಾನ ತೊರೆದ ಪಂತ್, ಅವರ ಸ್ಥಾನದಲ್ಲಿ, ಧ್ರುವ್ ಜುರೆಲ್ 49 ಓವರ್ಗಳಿಗೆ ವಿಕೆಟ್ ಕೀಪಿಂಗ್ ಮಾಡಿದ್ದಾರೆ. ಪಂತ್ ಪಂದ್ಯದಲ್ಲಿ ಮುಂದುವರೆಯುತ್ತಾರೊ ಅಥವಾ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.