ಮುಂಬೈ, ಮೇ. 22 (DaijiworldNews/TA): ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಭಾರತ 'ಎ' ವಿರುದ್ಧ ಇಂಗ್ಲೆಂಡ್ ಲಯನ್ಸ್ನ ಮುಂಬರುವ ನಾಲ್ಕು ದಿನಗಳ ಪಂದ್ಯಗಳಿಗೆ 14 ಜನರ ತಂಡವನ್ನು ಪ್ರಕಟಿಸಿದೆ.

ಪ್ರಕಟಣೆಯ ಪ್ರಕಾರ, ಸೋಮರ್ಸೆಟ್ನ ಜೇಮ್ಸ್ ರೆವ್ ಮೊದಲ ಬಾರಿಗೆ ಲಯನ್ಸ್ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಪಂದ್ಯವು ಮೇ 30 ಶುಕ್ರವಾರದಿಂದ ಕ್ಯಾಂಟರ್ಬರಿಯ ಸೇಂಟ್ ಲಾರೆನ್ಸ್ನ ಸ್ಪಿಟ್ಫೈರ್ ಮೈದಾನದಲ್ಲಿ ನಡೆಯಲಿದ್ದು, ಎರಡನೇ ಪಂದ್ಯವು ಜೂನ್ 6 ಶುಕ್ರವಾರದಿಂದ ನಾರ್ಥಾಂಪ್ಟನ್ನ ಕೌಂಟಿ ಮೈದಾನದಲ್ಲಿ ನಡೆಯಲಿದೆ.
ಇಂಗ್ಲೆಂಡ್ ಲಯನ್ಸ್ ತಂಡದಲ್ಲಿ ಇಂಗ್ಲೆಂಡ್ನ ಮಾಜಿ ಆಟಗಾರ ಆಂಡ್ರ್ಯೂ ಫಿಂಟ್ಲಾಫ್ ಪುತ್ರ ರಾಕಿ ಫ್ಲಿಂಟಾಫ್ ಸ್ಥಾನ ಪಡೆದಿದ್ದಾರೆ. ಈ ಹಿಂದೆ ಕೌಂಟಿ ಚಾಂಪಿಯನ್ಶಿಪ್ ಪಂದ್ಯಗಳ ಮೂಲಕ ಗಮನ ಸೆಳೆದಿದ್ದ ರಾಕಿ ಇದೀಗ ಇಂಗ್ಲೆಂಡ್ ಲಯನ್ಸ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಭಾರತ ಎ ವಿರುದ್ಧ ಇಂಗ್ಲೆಂಡ್ ಲಯನ್ಸ್ ತಂಡ :
ಜೇಮ್ಸ್ ರೆವ್ (ಸೋಮರ್ಸೆಟ್ – ನಾಯಕ), ಫರ್ಹಾನ್ ಅಹ್ಮದ್ (ನಾಟಿಂಗ್ಹ್ಯಾಮ್ಶೈರ್), ರೆಹಾನ್ ಅಹ್ಮದ್ (ಲೀಸೆಸ್ಟರ್ಶೈರ್), ಸೋನಿ ಬೇಕರ್ (ಹ್ಯಾಂಪ್ಶೈರ್), ಜೋರ್ಡಾನ್ ಕಾಕ್ಸ್ (ಎಸೆಕ್ಸ್), ರಾಕಿ ಫ್ಲಿಂಟಾಫ್ (ಲಂಕಾಷೈರ್), ಎಮಿಲಿಯೊ ಗೇ (ಡರ್ಹ್ಯಾಮ್), ಟಾಮ್ ಹೈನ್ಸ್ (ಸಸೆಕ್ಸ್), ಜಾರ್ಜ್ ಹಿಲ್ (ಯಾರ್ಕ್ಶೈರ್), ಜೋಶ್ ಹಲ್ (ಲೀಸೆಸ್ಟರ್ಶೈರ್), ಎಡ್ಡಿ ಜ್ಯಾಕ್ (ಹ್ಯಾಂಪ್ಶೈರ್), ಬೆನ್ ಮೆಕಿನ್ನಿ (ಡರ್ಹ್ಯಾಮ್), ಡ್ಯಾನ್ ಮೌಸ್ಲಿ (ವಾರ್ವಿಕ್ಶೈರ್), ಅಜೀತ್ ಸಿಂಗ್ ಡೇಲ್ (ಗ್ಲೌಸೆಸ್ಟರ್ಶೈರ್), ಕ್ರಿಸ್ ವೋಕ್ಸ್ (ವಾರ್ವಿಕ್ಶೈರ್)
ಒಂದು ವೇಳೆ ಭಾರತ ಎ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದರೆ ರಾಕಿ ಫಿಂಟ್ಲಾಫ್ ಇಂಗ್ಲೆಂಡ್ ತಂಡದಲ್ಲೂ ಸ್ಥಾನ ಪಡೆಯಲಿದ್ದಾರೆ. 17 ವರ್ಷದ ರಾಕಿ ಫಿಂಟ್ಲಾಫ್ ಟೀಮ್ ಇಂಡಿಯಾ ಎ ವಿರುದ್ಧ ಉತ್ತಮ ಪ್ರದರ್ಶನ ನೀಡಿದರೆ, ಸೀನಿಯರ್ ತಂಡಕ್ಕೆ ಸೆಲೆಕ್ಟ್ ಆಗಬಹುದು ಎನ್ನಲಾಗಿದೆ.